ಕುಶಾಲನಗರ, ಅ. 18: ಕುಶಾಲನಗರ ಗಡಿಭಾಗದಲ್ಲಿರುವ ಕಾವೇರಿ ಪ್ರತಿಮೆಯ 8ನೇ ವಾರ್ಷಿಕೋತ್ಸವ ಮತ್ತು ಪವಿತ್ರ ತೀರ್ಥ ವಿತರಣೆ ಕಾರ್ಯಕ್ರಮ ನಡೆಯಿತು. ಕೊರೊನಾ ಹಿನ್ನೆಲೆಯಲ್ಲಿ ಸರಳ ಕಾರ್ಯಕ್ರಮ ಹಮ್ಮಿಕೊಂಡ ಬಾರವಿ ಬ್ರದರ್ಸ್ ತಂಡದ ಸದಸ್ಯರು ಪವಿತ್ರ ತೀರ್ಥವನ್ನು ವಿತರಿಸಿದರು. ವಾರ್ಷಿಕೋತ್ಸವದ ಅಂಗವಾಗಿ ಪರಮೇಶ್ವರ ಭಟ್ ನೇತೃತ್ವದ ಅರ್ಚಕರ ತಂಡದಿಂದ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭ ಉದ್ಯಮಿಗಳಾದ ಎಸ್‍ಎಲ್‍ಎನ್ ವಿಶ್ವನಾಥನ್, ಸಾತಪ್ಪನ್, ಬಾರವಿ ತಂಡದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್ ಮತ್ತಿತರರು ಇದ್ದರು.