ಮಡಿಕೇರಿ, ಅ. 18 : ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಜಿಲ್ಲೆಯಲ್ಲಿ ಸಮಿತಿ ರಚನೆ ಹಾಗೂ ಕಸ್ತೂರಿ ರಂಗನ್ ವರದಿ ಅನುಷ್ಠಾನ ಯತ್ನದ ವಿರುದ್ಧದ ಹೋರಾಟದ ಅಂಗವಾಗಿ ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಶನಿವಾರ ವೇದಿಕೆಯ ತಾಲೂಕು ಸಂಚಾಲಕ ಪ್ರದೀಪ್ ಬನ್ನೂರುಪಟ್ಟೆ ಕರಿಕೆ ನೇತೃತ್ವದಲ್ಲಿ ಜಿಲ್ಲೆಯ ಪ್ರಮುಖ ನಾಯಕರನ್ನೊಳಗೊಂಡ ಸಭೆ ಜರುಗಿತು.
ವೇದಿಕೆ ಜಿಲ್ಲಾ ಸಮಿತಿ ಸದಸ್ಯ ಭಾನುಪ್ರಕಾಶ್ ಪೆರುಮುಂಡ ವೇದಿಕೆಯ ಕಾರ್ಯಸ್ವರೂಪದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಕೊಡಗು ಜಿಲ್ಲಾ ಪಂಚಾಯತ್ ಸದಸ್ಯೆ ಕವಿತಾ ಪ್ರಭಾಕರ್, ಮಾಜಿ ಮಂಡಲ ಪ್ರಧಾನರಾದ ಕೋಡಿ ಪೆÇನ್ನಪ್ಪ ಅವರುಗಳು, ವರದಿ ಅನುಷ್ಠಾನದಿಂದ ಜಿಲ್ಲೆಯಲ್ಲಿ ರಸ್ತೆ ಸಹಿತ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮಾರಕವಾಗಲಿದೆ. ಇದರ ವಿರುದ್ಧ ಹೋರಾಟ ಕೈಗೊಳ್ಳಬೇಕಾಗಿದೆ ಎಂದರು.
ಸಭೆಯಲ್ಲಿ ಬಿ.ಎ.ಗಣೇಶ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹೊಸಮನೆ ಹರೀಶ್, ದುಶ್ಯಂತ ಹೆಚ್.ಬಿ., ಕೆ.ಕೆ. ಪುರು ಷೋತ್ತಮ, ಕಂಡಿಗೆ ಹರೀಶ್, ಪಾಂಡಿ ನಂಜುಂಡ , ಕೋಡಿ ಸೀತಾರಾಮ ಉಪಸ್ಥಿತರಿದ್ದರು.