ಸಿದ್ದಾಪುರ, ಅ. 18: ವಿವಾದಿತ ಜಾಗದಲ್ಲಿ ಇರುವ ಬೇಲಿಯನ್ನು ಗ್ರಾಮಸ್ಥರು ತೆರವುಗೊಳಿಸಿದರು ಎಂಬ ಆರೋಪದಡಿಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾದ ಘಟನೆ ಅತ್ತಿಮಂಗಲದಲ್ಲಿ ನಡೆಯಿತು. ನೆಲ್ಲಿಹುದಿಕೇರಿ ಅತ್ತಿಮಂಗಲ ಸಮೀಪದಿಂದ ನಲ್ವತೇಕ್ರೆ ಬರಡಿಗೆ ತೆರಳುವ ಸಾರ್ವಜನಿಕ ರಸ್ತೆಯ ವಿಚಾರದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಕಾಫಿ ತೋಟದ ಮಾಲೀಕರ ನಡುವೆ ವಿವಾದ ನಡೆಯುತ್ತಿತ್ತು. ನ್ಯಾಯಾಲಯವು ಕಳೆದ ಕೆಲವು ತಿಂಗಳ ಹಿಂದೆ ಕಾಫಿ ತೋಟ ಮಾಲೀಕರ ಪರ ತೀರ್ಪು ನೀಡಿತ್ತು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಇದರ ವಿರುದ್ಧ ಗ್ರಾಮ ಪಂಚಾಯಿತಿಯು ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿಯುತ್ತಿದೆ. ಈ ನಡುವೆ ಶನಿವಾರದಂದು ಸಂಜೆ ಬರಡಿ ಗ್ರಾಮಸ್ಥರು ಸೇರಿ ವಿವಾದಿತ ಜಾಗದಲ್ಲಿದ್ದ ಬೇಲಿಯನ್ನು ತೆರವುಗೊಳಿಸಿದ್ದಾರೆ ಎಂದು ಆರೋಪಿಸಿ ಕೆಲಕಾಲ ಗೊಂದಲ ಏರ್ಪಟ್ಟಿತ್ತು. ಸ್ಥಳಕ್ಕೆ ಸಿದ್ದಾಪುರ ಪೆÇಲೀಸರು ತೆರಳಿ ಪರಿಶೀಲನೆ ನಡೆಸಿದರು. ಈ ಬಗ್ಗೆ ತೋಟದ ಮಾಲೀಕರಾದ ಲಿಸ್ಲಿ ಪಿಂಟೋ ಸಿದ್ದಾಪುರ ಪೆÇಲೀಸ್ ಠಾಣೆಗೆ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಇತರರ ವಿರುದ್ಧ ದೂರು ದಾಖಲಿಸಿದ್ದಾರೆ.