ಸುಂಟಿಕೊಪ್ಪ, ಅ. 18: ಹೆಲ್ಮೆಟ್ ಹಾಗೂ ಮಾಸ್ಕ್ ಧರಿಸದೆ ದಿಚಕ್ರ ವಾಹನ ಚಾಲಿಸುತ್ತಿದ್ದ ಚಾಲಕರಿಗೆ ಸಂತೆ ದಿನವಾದ ಭಾನುವಾರ ಸುಂಟಿಕೊಪ್ಪ ಪೊಲೀಸರು ದಂಡ ವಿಧಿಸಿದರು. ಸುಂಟಿಕೊಪ್ಪ ಬಸ್ ನಿಲ್ದಾಣದ ಬಳಿ ಸುಂಟಿಕೊಪ್ಪ ಠಾಣಾಧಿಕಾರಿ ವೆಂಕಟರಮಣ, ಮುಖ್ಯಪೇದೆ ಹಾಗೂ ಸಿಬ್ಬಂದಿ ವಾಹನಗಳನ್ನು ತಪಾಸಣೆ ನಡೆಸಿ ಚಾಲಕರಿಗೆ ಬಿಸಿಮುಟ್ಟಿಸಿದರು.