ಮಡಿಕೇರಿ, ಅ. 18 : ಕಾವೇರಿ ತೀರ್ಥೋದ್ಭವದ ಸಂದರ್ಭ ಭಕ್ತರ ಭಾವನೆಗೆ ವಿರುದ್ಧವಾಗಿ ನಿಯಮಗಳನ್ನು ರೂಪಿಸಿದ ಜಿಲ್ಲಾಡಳಿತ ಮಡಿಕೇರಿ ದಸರಾ ವಿಚಾರದಲ್ಲೂ ಮೂಗು ತೂರಿಸಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಟೀಕಿಸಿದ್ದಾರೆ. ವಿಜಯದಶಮಿಯಂದು ಮಧ್ಯರಾತ್ರಿ 12 ಗಂಟೆಯ ನಂತರ ಸೂರ್ಯೋದಯಕ್ಕೂ ಮೊದಲು ಬನ್ನಿ ಕಡಿಯುವ ಮೂಲಕ ದಸರಾಕ್ಕೆ ತೆರೆ ಎಳೆಯುವ ಸಂಪ್ರದಾಯ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ. ಆದರೆ ರಾತ್ರಿ 10 ಗಂಟೆಯೊಳಗೆ ಎಲ್ಲಾ ವಿಧಿ, ವಿಧಾನಗಳನ್ನು ಮುಗಿಸಬೇಕೆಂದು ಒತ್ತಡ ಹೇರುತ್ತಿರುವುದು ಸರಿಯಲ್ಲವೆಂದು ಗಣೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನಜಂಗುಳಿಗೆ ಅವಕಾಶ ನೀಡದೆ ಎಂದಿನಂತೆ ವಿಜಯದಶಮಿ ಸಂಪ್ರದಾಯವನ್ನು ಆಚರಿಸಲು ಅವಕಾಶ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಟೀಕೆ : ತಲಕಾವೇರಿ ಕ್ಷೇತ್ರದಲ್ಲಿ ಕಾವೇರಿ ತೀರ್ಥೋದ್ಭವದ ಕ್ಷಣವನ್ನು ವೀಕ್ಷಿಸಲು ಭಕ್ತರಿಗೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ಕ್ರಮ ಖಂಡನೀಯ. ಆದರೆ ಆಡಳಿತ ಪಕ್ಷದಲ್ಲಿರುವ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ವಿರೋಧ ಪಕ್ಷದವರಂತೆ ವರ್ತಿಸಿದ ರೀತಿ ಕೂಡ ಸರಿ ಇಲ್ಲವೆಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಟೀಕಿಸಿದ್ದಾರೆ.