ಕುಶಾಲನಗರ, ಅ. 18: ಎಲ್ಲೆಡೆ ಉತ್ತಮ ಪರಿಸರ ನಿರ್ಮಾಣ ಹಿನ್ನೆಲೆ ಮಕ್ಕಳು, ವೃದ್ಧರಾದಿಯಾಗಿ ಗಿಡಮರಗಳನ್ನು ನೆಟ್ಟು ಬೆಳೆಸುವ ಹವ್ಯಾಸ ಒಂದೆಡೆ ಯಾದರೆ ಕುಶಾಲನಗರದಲ್ಲಿ ಕೆಲವು ಮಂದಿ ನೆಟ್ಟು ಬೆಳೆಸಿದ ಗಿಡಮರಗಳನ್ನು ನಿಗೂಢವಾಗಿ ಸಾಯಿಸುವ ಹವ್ಯಾಸದಲ್ಲಿ ತೊಡಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಕುಶಾಲನಗರ ಪಟ್ಟಣದ ಗೌಡ ಸಮಾಜ ರಸ್ತೆಯ ಬಳಿ ವಾಣಿಜ್ಯ ಕಟ್ಟಡವೊಂದರ ಮುಂಭಾಗದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿದ್ದ ಮಳೆಮರವೊಂದು ಏಕಾಏಕಿ ಒಣಗಲು ಆರಂಭಗೊಳ್ಳುತ್ತಲೇ ಎಲೆಗಳು ದಿಢೀರನೆ ಉದುರಿ ಇದೀಗ ತನ್ನ ಅಸಿತ್ವವನ್ನೇ ಕಳೆದುಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ.
ಈ ಮರವನ್ನು ವಿಷವುಣಿಸಿ ನಾಶಗೊಳಿಸಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಸ್ಥಳೀಯ ಸಂಘಸಂಸ್ಥೆಗಳ ಪ್ರಮುಖರಾದ ಮಂಜುನಾಥ್, ಎಂ.ಡಿ. ಕೃಷ್ಣಪ್ಪ ಅರಣ್ಯ ಇಲಾಖೆಗೆ ದೂರು ನೀಡಿದ್ದು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.