ಮಡಿಕೇರಿ, ಅ. 18: ತುಲಾ ಸಂಕ್ರಮಣ ಜಾತ್ರೆಯಲ್ಲಿ ಮೊದಲ ಬಾರಿಗೆ ನಮ್ಮ ತಂದೆ ಹಾಗೂ ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ದಿ. ನಾರಾಯಣಾಚಾರ್ ಅವರ ಅನುಪಸ್ಥಿತಿಯಲ್ಲಿ ತುಲಾ ಸಂಕ್ರಮಣ ಜಾತ್ರೆಯ ಕಾವೇರಿ ತೀರ್ಥೋದ್ಭವವನ್ನು ವೀಕ್ಷಿಸುವಾಗ ಅಪಾರ ನೋವಿನೊಂದಿಗೆ ದುಃಖಉಂಟಾದುದಾಗಿ ಅರ್ಚಕರ ಪುತ್ರಿಯರಾದ ನಮಿತಾ ಆಚಾರ್ ಹಾಗೂ ಶಾರಾದ ಆಚಾರ್ ಅಭಿಪ್ರಾಯಪಟ್ಟರು.
ತುಲಾ ಸಂಕ್ರಮಣ ಜಾತ್ರೆಯಂದು ತಲಕಾವೇರಿಯಲ್ಲಿ ‘ಶಕ್ತಿ’ಯೊಂದಿಗೆ ತಮ್ಮ ಮನದಾಳದ ನೋವನ್ನು ತೋಡಿಕೊಂಡ ಅವರುಗಳು ತಮ್ಮ ತಂದೆ - ತಾಯಿ, ದೊಡ್ಡಪ್ಪ ಹಾಗೂ ಸಹಾಯಕ ಅರ್ಚಕರಿಬ್ಬರೂ ಈ ಹಿಂದೆ ಘಟಿಸಿದ ದುರಂತದಲ್ಲಿ ಮೃತರಾಗಿರುವ ಬಗ್ಗೆ ಅವರುಗಳ ಆತ್ಮಕ್ಕೆ ಶಾಂತಿಗಾಗಿ ಪ್ರಾರ್ಥಿಸಿದಾಗಿಯೂ ನುಡಿದರು. ಕಾವೇರಿ ಮಾತೆಯೂ ಎಲ್ಲಾ ಸದ್ಭಕ್ತರೊಂದಿಗೆ ಲೋಕಕ್ಕೆ ಕಲ್ಯಾಣವನ್ನು ಕರುಣಿಸುವಂತೆ ಈ ಸಂದರ್ಭ ವಿಶೇಷವಾಗಿ ಪ್ರಾರ್ಥಿಸುವದಾಗಿ ಮಾರ್ನುಡಿದರು.