ಕಡಂಗ, ಅ. 18: ಕೊಡಗು ಸುನ್ನಿ ವೆಲ್ಫರ್ ಸಂಘಟನೆ ಯುಎಇ ಸಮಿತಿ ವತಿಯಿಂದ ಕಳೆದ 15 ದಿನಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡ ಭಾಗಮಂಡಲ ಸಮೀಪದ ತಾವೂರು ಗ್ರಾಮದ ಸಫ್ವಾನ ಎಂಬ ಬಡ ಯುವತಿಯ ಚಿಕಿತ್ಸೆಗೆ ಸಹಾಯಧನ ನೀಡಲಾಯಿತು.

ಸಹಾಯಧನವನ್ನು ತಾವೂರು ಜಮಾಹತ್ ಅಧ್ಯಕ್ಷ ಅಬ್ದುಲ್ ಲತೀಫ್ ಸಮ್ಮುಖದಲ್ಲಿ ಸಂಘಟನೆಯ ನಿರ್ದೇಶಕ ಮಹಮ್ಮದ್ ಹಾಜಿ ಕೊಂಡಂಗೇರಿ ಹಸ್ತಾಂತರ ಮಾಡಿದರು. ಈ ಸಂದರ್ಭ ಊರಿನ ಪ್ರಮುಖರಾದ ಉಸ್ಮಾನ್ ತಾವೂರ್, ದುಬೈ ಸುನ್ನಿ ವೆಲ್ಫೇರ್ ಉಪಾಧ್ಯಕ್ಷ ಅರಾಫತ್ ನಾಪೆÇೀಕ್ಲು, ಶಾರ್ಜಾ ಸುನ್ನಿ ವೆಲ್ಫೇರ್ ನಾಯಕ ಸಲಾಂ ಕೊಂಡಂಗೇರಿ, ಉಬೈಸ್ ತಾವೂರ್, ಶಿಯಾಬ್ ತಾವೂರ್ ಹಾಜರಿದ್ದರು.