ಗೋಣಿಕೊಪ್ಪ ವರದಿ, ಅ. 18 ; ನಿಟ್ಟೂರು-ಕಾರ್ಮಾಡು ಕಾವೇರಿ ತೀರ್ಥ ವಿತರಣಾ ಸಮಿತಿ ವತಿಯಿಂದ ಗ್ರಾಮದಲ್ಲಿ ತೀರ್ಥ ವಿತರಣೆ ಮಾಡಲಾಯಿತು. ತಲಕಾವೇರಿಯಿಂದ ತೀರ್ಥ ತಂದು ಶನಿವಾರ ಸಂಜೆ ಬಾಳೆಲೆ, ನಿಟ್ಟೂರು, ಕಾರ್ಮಾಡು, ಕೊಟ್ಟಗೇರಿ ಭಾಗದಲ್ಲಿ ವಿತರಿಸಲಾಯಿತು. ಸಮಿತಿ ಸಂಚಾಲಕ ಕಾಟಿಮಾಡ ಶರೀನ್ ಮುತ್ತಣ್ಣ ಹಾಗೂ ಸದಸ್ಯರು ಸೇವಾ ಕಾರ್ಯದಲ್ಲಿ ಪಾಲ್ಗೊಂಡರು.