ಸಿದ್ದಾಪುರ, ಅ. 16: ಕೋಳಿಗಳನ್ನು ಬೇಟೆಯಾಡಲು ಬಂದಿದ್ದ ಚಿರತೆಯನ್ನು ಹೋಲುವ ಕಾಡು ಬೆಕ್ಕೊಂದು ನೆಲ್ಲಿಹುದಿಕೇರಿ ಗ್ರಾಮದಲ್ಲಿ ಪತ್ತೆಯಾಗಿದೆ. ನೆಲ್ಲಿಹುದಿಕೇರಿ ಶಾಲಾ ರಸ್ತೆಯ ಎ.ಪಿ.ಜೆ. ಬಡಾವಣೆ ನಿವಾಸಿ ಹಾಗೂ ಕಟ್ಟಡ ಗುತ್ತಿಗೆದಾರ ಶಶಿ ಎಂಬವರ ಮನೆಯ ಬಳಿ ಇರುವ ಕೋಳಿ ಗೂಡಿನಲ್ಲಿ ಚಿರತೆಯನ್ನು ಹೋಲುವ ಬೆಕ್ಕು ಕಂಡು ಬಂದಿದ್ದು, ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ನಂತರ ಕುಶಾಲನಗರ ಉಪವಲಯಾರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಬೇಟಿ ನೀಡಿ ಬೆಕ್ಕನ್ನು ರಕ್ಷಣೆ ಮಾಡಿದರು. ಇತ್ತೀಚಿನ ದಿನಗಳಲ್ಲಿ ಕೋಳಿ ಹಾಗೂ ಪಕ್ಷಿಗಳನ್ನು ಬೇಟೆಯಾಡಲು ಇಂತಹ ಚಿರತೆಯನ್ನು ಹೋಲುವ ಬೆಕ್ಕುಗಳು ಕಂಡು ಬರುತ್ತಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು. ಇದನ್ನು ‘ಲೆಪರ್ಡ್ ಕ್ಯಾಟ್’ ಎಂದು ಕರೆಯಲಾಗುತ್ತದೆ.