ಕೂಡಿಗೆ, ಅ.16: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಸಲುಗೂಡು ಗ್ರಾಮದ ಸರ್ವೆ ನಂಬರ್ 26ರ 1.06 ಎಕರೆ ಪೈಸಾರಿ ಕೆರೆ ಒತ್ತುವರಿ ಜಾಗವನ್ನು ತೆರವುಗೊಳಿಸಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಹಸ್ತಾಂತರಿಸಲಾಯಿತು
ಈ ಸಂದರ್ಭ ಕುಶಾಲನಗರ ಕಂದಾಯ ಪರಿವೀಕ್ಷಣಾ ಅಧಿಕಾರಿ ಮಧುಸೂದನ್, ಹೆಬ್ಬಾಲೆ ಗ್ರಾಮ ಲೆಕ್ಕಾಧಿಕಾರಿ ಸಚಿನ್ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಮತ್ತು ಗೌತಮ್ಮ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದವರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.