ಮಡಿಕೇರಿ, ಅ. 16: ಮಡಿಕೇರಿ ನಗರ ದಸರಾ ಸಮಿತಿಯಿಂದ ಈ ಬಾರಿಯ ದಸರಾ ಉತ್ಸವ ನಿರ್ವಿಘ್ನವಾಗಿ ನೆರವೇರುವಂತೆ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹಾಗೂ ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ ಅವರ ಮುಂದಾಳತ್ವದಲ್ಲಿ ನಗರದ 4 ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಉಪಾಧ್ಯಕ್ಷರಾದ ಎನ್. ಜೀವನ್, ಬಿ.ಎಂ. ರಾಕೇಶ್, ಕಾರ್ಯದರ್ಶಿ ಕುಶ ಮುಂತಾದವರು ಹಾಜರಿದ್ದರು.