ಸಿದ್ದಾಪುರ: ನೆಲ್ಲಿಹುದಿಕೇರಿಯ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಬಿಜೆಪಿ ಹಿರಿಯ ನಾಯಕ, ದಿ. ಪಟ್ಟೆಮನೆ ಶೇಷಪ್ಪ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಬಿಜೆಪಿ ಪಕ್ಷದ ಹಿರಿಯ ನಾಯಕರಾಗಿದ್ದ ಪಟ್ಟೆಮನೆ ಶೇಷಪ್ಪ ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ನೆಲ್ಲಿಹುದಿಕೇರಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಬೆಳ್ಯಪ್ಪ, ಸಹ ಪ್ರಮುಖ ಪ್ರಮೋದ್, ಯುವ ಮೋರ್ಚಾ ಅಧ್ಯಕ್ಷ ಸಚಿನ್, ಪಕ್ಷದ ಪದಾಧಿಕಾರಿಗಳಾದ ಮಹೇಂದ್ರ, ಚಂದ್ರಶೇಖರ್, ಸತೀಶ್, ಧರ್ಮ, ಸುಜಾತ, ವಸಂತ್‍ಕುಮಾರ್ ಇನ್ನಿತರರು ಹಾಜರಿದ್ದರು.
*ಸಿದ್ದಾಪುರ: ಹಿರಿಯ ಬಿಜೆಪಿ ಮುಖಂಡ ಪಟ್ಟೆಮನೆ ಶೇಷಪ್ಪ ಅವರ ನಿಧನಕ್ಕೆ ವಾಲ್ನೂರು-ತ್ಯಾಗತ್ತೂರು ಬಿಜೆಪಿ ಶಕ್ತಿ ಕೇಂದ್ರ ಸಂತಾಪ ಸೂಚಿಸಿತು.
ವಾಲ್ನೂರು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಂತಾಪ ಸಭೆಯಲ್ಲಿ ಶಕ್ತಿ ಕೇಂದ್ರದ ಪ್ರಮುಖ್ ಮನುಮಹೇಶ್, ಸಹ ಪ್ರಮುಖ್ ರಾಜೇಶ್, ಎಸ್‍ಟಿ ಘಟಕದ ಅಧ್ಯಕ್ಷ ಕೃಷ್ಣಪ್ಪ, ಎಸ್‍ಸಿ ಅಧ್ಯಕ್ಷ ಜನಾರ್ಧನ, ಹಿಂದುಳಿದ ವರ್ಗಗಳ ದಿನೇಶ್, ಯುವ ಪ್ರಮುಖ್ ಮದನ್ ಕಾರ್ಯಪ್ಪ, ಮಹಿಳಾ ಘಟಕದ ಪ್ರಮುಖ್ ಸವಿತಾ ಜಯಂತ್, ಸಹ ಪ್ರಮುಖ್ ಕವಿತಾ ದೇವಿಲಾಲ್, ಪಂಚಾಯಿತಿ ಮಾಜಿ ಸದಸ್ಯರುಗಳಾದ ಅಂಚೆಮನೆ ಸುಧಿ, ಸತೀಶ್, ಉಮೇಶ್, ಮತ್ತಿತರರು ಹಾಜರಿದ್ದು, ಶೇಷಪ್ಪ ಅವರಿಗೆ ಗೌರವ ಅರ್ಪಿಸಿದರು.