ಗೋಣಿಕೊಪ್ಪ ವರದಿ, ಅ. 17: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ದೇಶನದಂತೆ ಇಲ್ಲಿನ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದಲ್ಲಿ ಕೋವಿಡ್-19 ಮುನ್ನೆಚ್ಚರಿಕೆ ಜಾಗೃತಿ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಸೂಕ್ತವರ್ತನಾ ಕ್ರಮಗಳ ಮಾರ್ಗಸೂಚಿಯಂತೆ ಮಾಸ್ಕ್ ಧರಿಸಿ, ದೈಹಿಕವಾಗಿ ದೂರವನ್ನು ಅನುಸರಿಸಿ, ಕೈಯಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು ಎಂಬ ಸಂದೇಶವನ್ನು ಕರಪತ್ರ ಹಾಗೂ ಬ್ಯಾನರ್ ಮೂಲಕ ಅನಾವರಣಗೊಳಿಸಲಾಯಿತು. ಗ್ರಾಹಕರು, ಸಾರ್ವಜನಿಕರಿಗೆ ಕರಪತ್ರ ವಿತರಣೆ ಮಾಡಲಾಯಿತು.

ಪ್ರಧಾನಮಂತ್ರಿ ಭಾರತೀಯ ಜನಔಷಧಿ ಕೇಂದ್ರದ ಮಾಲೀಕ ಚೇಂದ್ರಿಮಾಡ ಸಿ. ಗಣಪತಿ ಮಾತನಾಡಿ, ಕೇಂದ್ರದ ನಿರ್ದೇಶನದಂತೆ ಕೋವಿಡ್-19 ಮುನ್ನೆಚ್ಚರಿಕೆಗಳೊಂದಿಗೆ ಅನ್‍ಲಾಕ್ ಎನ್ನುವ ಜನಾಂದೋಲನ ಮೂಲಕ ಕ್ರಮಗಳ ಬಗ್ಗೆ ಜಾಗೃತಿ ನೀಡಲಾಗುತ್ತಿದೆ. ಸ್ಥಳೀಯರಿಗೆ ಕರಪತ್ರದ ಮೂಲಕ ಮನವರಿಕೆ ಮಾಡಲಾಗುತ್ತಿದೆ ಎಂದರು. ಈ ಸಂದರ್ಭ ಸ್ಥಳೀಯರಾದ ಸ್ಟಾಲಿನ್, ಬಾಲಕೃಷ್ಣ, ಎಂ. ಎಚ್. ಭಾರತಿ ಇದ್ದರು.