ಸುಂಟಿಕೊಪ್ಪ: ಸುಂಟಿಕೊಪ್ಪ ಕೃಷಿ ಪತ್ತಿನ ಸಹಕಾರ ಸಂಘದ ಬ್ಯಾಂಕಿನ ಅಧ್ಯಕ್ಷರಾಗಿ, ಕುಶಾಲನಗರ ಆರ್‍ಎಂಸಿ ಅಧ್ಯಕ್ಷರಾಗಿದ್ದ ಜಿಲ್ಲಾ ಬಿಜೆಪಿ ಸದಸ್ಯ ಪಟ್ಟೆಮನೆ ಶೇಷಪ್ಪ ಅವರ ನಿÀಧನಕ್ಕೆ ಸುಂಟಿಕೊಪ್ಪ ಬಿಜೆಪಿ ವತಿಯಿಂದ ಸಂತಾಪ ಸಭೆ ನಡೆಸಲಾಯಿತು.

ಇಲ್ಲಿನ ಶ್ರೀ ರಾಮಮಂದಿರ ಸಭಾಂಗÀಣದಲ್ಲಿÀ ಆಯೋಜಿಸಲಾದ ಸಭೆಯಲ್ಲಿ ಮಾಜಿ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಸೇರಿದಂತೆ ಪಕ್ಷದ ಮುಖಂಡರು ಭಾಗವಹಿಸಿ ನಮನ ಸಲ್ಲಿಸಿದರು. ಈ ಸಂದರ್ಭ ಬೂತ್ ಪ್ರಮುಖರಾದ ಬಿ.ಕೆ. ಪ್ರಶಾಂತ್, ಕಾರ್ಯದರ್ಶಿ ನಾಗೇಶ್ ಪೂಜಾರಿ, ಕೆ.ಕೆ. ವಾಸುದೇವ್, ನಗರ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಯುವ ಮೋರ್ಚಾ ಅಧ್ಯಕ್ಷ ವಿಘ್ನೇಶ್, ಹಿಂದುಳಿದ ವರ್ಗದ ಅಧ್ಯಕ್ಷ ಸಿ.ಸಿ. ಸುನಿಲ್, ಮಾಜಿ ಪಂಚಾಯಿತಿ ಅಧ್ಯಕ್ಷೆ ಬಿ.ಐ. ಭವಾನಿ ಮಾಜಿ ಉಪಾಧ್ಯಕ್ಷ ಬಿ.ಎಸ್. ಸದಾಶಿವ ರೈ. ಮಹಿಳಾ ಸಂಘದ ಅಧ್ಯಕ್ಷೆ ಲೀಲಾ ಮೇದಪ್ಪ, ಸುಂಟಿಕೊಪ್ಪ ಬಿಜೆಪಿ ಹಿರಿಯ ಮುಖಂಡರಾದ ಸಗÀದೇವ್, ಬಿ.ಎಸ್. ಈರಪ್ಪ, ಬಿ.ಕೆ. ವಿಶ್ವನಾಥ ರೈ ಧನು ಕಾವೇರಪ್ಪ, ಮಾಗಿಲು ರವಿ ಸಿ.ಸಿ.ಎಲ್. ಶಶಿ, ಬಿ. ವಿಶ್ವನಾಥ ಪೂಜಾರಿ, ಬೋಪ್ಪಣ್ಣ, ಶರವಣ 7ನೇ ಮೈಲು ಕನ್ನೀಸ್ ಇತರರು ಹಾಜರಿದ್ದರು.