ಮುಳ್ಳೂರು, ಅ. 16: ಶನಿವಾರ ಸಂತೆಯಲ್ಲಿರುವ ಶ್ರೀ ಮಂಜು ನಾಥೇಶ್ವರ ಇಂಜಿನಿಯರಿಂಗ್ ವಕ್ರ್ಸ್ ಮಾಲೀಕ ಹಳ್ಳಿ ವಿಜ್ಞಾನಿ ಎ.ಡಿ.ಮೋಹನ್‍ಕುಮಾರ್ ಅವರು ನೂತನವಾಗಿ ಆವಿಷ್ಕಾರಗೊಳಿಸಿರುವ ಏಲಕ್ಕಿ ಒಣಗಿಸುವ ಯಂತ್ರದ ಪ್ರಾತ್ಯಕ್ಷಿಕಾ ಕಾರ್ಯಕ್ರಮವನ್ನು ಸಮೀಪದ ಕೊಡಗು-ಹಾಸನ ಗಡಿಭಾಗದಲ್ಲಿರುವ ಕಳಲೆ ಗ್ರಾಮದ ಪ್ರಗತಿಪರ ಕೃಷಿಕ ಕೆ.ಜಿ.ರಾಮಚಂದ್ರ ಅವರ ತೋಟದ ಮನೆಯಲ್ಲಿ ಏರ್ಪಡಿಸಲಾಗಿತ್ತು. ಶನಿವಾರಸಂತೆ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ನಡೆದ ಏಲಕ್ಕಿ ಒಣಗಿಸುವ ನೂತನ ಆವಿಷ್ಕಾರ ಗೊಂಡ ಯಂತ್ರದ ಪ್ರಾತ್ಯಕ್ಷಿಕಾ ಕಾರ್ಯಕ್ರಮವನ್ನು ಸಕಲೇಶಪುರ ಭಾರತೀಯ ಸಂಬಾರ ಮಂಡಳಿಯ ಏಲಕ್ಕಿ ಸಂಶೋಧನಾ ವಿಭಾಗದ ಹಿರಿಯ ವಿಜ್ಞಾನಿ ಡಾ.ವಾದಿರಾಜ್ ಉದ್ಘಾಟಿಸಿ ಮಾತನಾಡಿ-ಏಲಕ್ಕಿ ಪುರಾತನ ಬೆಳೆಯಾಗಿದ್ದು ದೇಶದ ಏಲಕ್ಕಿ ವಿಶ್ವ (ಮೊದಲ ಪುಟದಿಂದ) ಮಟ್ಟದಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದು ಕರ್ನಾಟಕ ಮತ್ತು ಕೇರಳದಲ್ಲಿ ಹೇರಳವಾಗಿ ಬೆಳೆಯ ಲಾಗುತ್ತಿದೆ ಎಂದರು. ಕರ್ನಾಟಕದಲ್ಲಿ ಕೊಡಗು, ಸಕಲೇಶಪುರ, ಚಿಕ್ಕ ಮಗಳೂರು ಜಿಲ್ಲೆಗಳಲ್ಲಿ ಕಾಫಿಯ ಜೊತೆಯಲ್ಲಿ ಏಲಕ್ಕಿ ಬೆಳೆಯುತ್ತಾರೆ; ಆದರೆ ಇತ್ತೀಚೆನ ವರ್ಷಗಳಲ್ಲಿ ಹವಮಾನ ವ್ಯತ್ಯಾಸದಿಂದ ಏಲಕ್ಕಿ ಬೆಳೆ ಶೇ. 60 ರಷ್ಟು ನಶಿಸಿ ಹೋಗುತ್ತಿದ್ದು ಏಲಕ್ಕಿ ಬೆಳೆಯಲು ಆಸಕ್ತಿವಹಿಸುತ್ತಿಲ್ಲ.

ಈ ನಿಟ್ಟಿನಲ್ಲಿ ಭಾರತೀಯ ಸಂಭಾರ ಮಂಡಳಿ, ಸಂಶೋಧನಾ ಸಂಸ್ಥೆ, ತೋಟಗಾರಿಕೆ ಇಲಾಖೆ ಏಲಕ್ಕಿ ಬೆಳೆಯನ್ನು ಅಭಿವೃದ್ಧಿ ಗೊಳಿಸುವ ಸಲುವಾಗಿ ಹಳೆಯ ತಳಿಗಳನ್ನು ಹೈಬ್ರಿಡ್ ತಳಿಯನ್ನಾಗಿ ಸಂಶೋಧಿಸಿ ಹೆಚ್ಚು ಇಳುವರಿ ಕೊಡುವ ನಲ್ಯಾಣಿ ಎಂಬ ಏಲಕ್ಕಿ ತಳಿಯನ್ನು ರೈತರಿಗೆ ವಿತರಿಸುತ್ತಿದೆ ಎಂದರು. ಇದರಿಂದ ಬಹಳಷ್ಟು ರೈತರು ಸ್ಥಗಿತಗೊಳಿಸಿದ ಏಲಕ್ಕಿ ಕೃಷಿಯನ್ನು ಮತ್ತೆ ಮುಂದುವರೆ ಸುತ್ತಿರುವ ಮೂಲಕ ಏಲಕ್ಕಿ ಬೆಳೆಯಿಂದ ಆರ್ಥಿಕ ಪ್ರಗತಿ ಕಾಣುತ್ತಿದ್ದಾರೆ ಎಂದರು. ರೈತರು ಒಂದೇ ಬೆಳೆಯನ್ನು ಅವಲಂಬಿಸದೆ ಪರ್ಯಾಯ ಬೆಳೆಯನ್ನು ಅವಲಂಬಿಸಬೇಕು, ಕಾಫಿ,

ಕರಿಮೆಣಸು ಜೊತೆ ಯಲ್ಲಿ ಏಲಕ್ಕಿ ಯನ್ನು ಪರ್ಯಾಯ ಬೆಳೆಯನ್ನಾಗಿ ಬೆಳೆಯಲು ಆಸಕ್ತಿವಹಿಸಬೇಕೆಂದರು.

ಹಾಸನ ಆಕಾಶವಾಣಿ ಕೇಂದ್ರದ ಕೃಷಿ ವಿಭಾಗದ ವಿಜ್ಞಾನಿ ಡಾ.ಕೇಶವ ಮೂರ್ತಿ, ಪ್ರಗತಿಪರ ಹಿರಿಯ ಕೃಷಿಕ ಕೆ.ಜಿ.ರಾಮಚಂದ್ರ, ಶನಿವಾರಸಂತೆ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಪಿ.ಲಕ್ಷ್ಮಣ್, ಶನಿವಾರಸಂತೆ ರೋಟರಿ ಕ್ಲಬ್

ಅಧ್ಯಕ್ಷ ಎಚ್.ವಿ. ದಿವಾಕರ್ ಮಾತನಾಡಿದರು. ಎ.ಡಿ.ಮೋಹನ್ ಕುಮಾರ್ ಯಂತ್ರ ಈ ಬಗ್ಗೆ ಮಾಹಿತಿ ನೀಡಿದರು.

-ಭಾಸ್ಕರ್ ಮುಳ್ಳೂರು