ಮಡಿಕೇರಿ, ಅ. 16: ನಮ್ಮ ಹಿರಿಯರು ರೂಢಿ ಮಾಡಿಕೊಂಡಿದ್ದ ಹಿತ್ತಾಳೆ, ತಾಮ್ರ, ಕಂಚುವಿನಂತಹ ಪಾತ್ರೆಗಳು ಹಾಗೂ ಇತರ ಗೃಹೋಪಯೋಗಿ ಪರಿಕರಗಳ ಬಳಕೆಯಿಂದ ಆರೋಗ್ಯ ಪೂರ್ಣ ಬದುಕು ಮತ್ತು ಜಾನಪದ ಪರಂಪರೆಯನ್ನು ಕಡೆಗಣಿಸದೆ; ಅವೆಲ್ಲವನ್ನೂ ಕಾಪಾಡಿಕೊಂಡು ಜಗತ್ತಿಗೆ ಪರಿಚಯಿಸೋಣ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶೆ ನೂರುನ್ನಿಸಾ ಕರೆ ಮಡಿಕೇರಿ, ಅ. 16: ನಮ್ಮ ಹಿರಿಯರು ರೂಢಿ ಮಾಡಿಕೊಂಡಿದ್ದ ಹಿತ್ತಾಳೆ, ತಾಮ್ರ, ಕಂಚುವಿನಂತಹ ಪಾತ್ರೆಗಳು ಹಾಗೂ ಇತರ ಗೃಹೋಪಯೋಗಿ ಪರಿಕರಗಳ ಬಳಕೆಯಿಂದ ಆರೋಗ್ಯ ಪೂರ್ಣ ಬದುಕು ಮತ್ತು ಜಾನಪದ ಪರಂಪರೆಯನ್ನು ಕಡೆಗಣಿಸದೆ; ಅವೆಲ್ಲವನ್ನೂ ಕಾಪಾಡಿಕೊಂಡು ಜಗತ್ತಿಗೆ ಪರಿಚಯಿಸೋಣ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶೆ ನೂರುನ್ನಿಸಾ ಕರೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ತಿಳಿ ಹೇಳಿದರು. ಈ ದಿಸೆಯಲ್ಲಿ ಪೊನ್ನಚನ ಮಧು ಅವರು ಕೊಡಗಿನ ಗೃಹೋಪಯೋಗಿ ಹಳೆಯ ವಸ್ತುಗಳನ್ನು ಸಂಗ್ರಹಿಸುತ್ತಿರುವದು ಶ್ಲಾಘನೀಯ ಎಂದು ಪ್ರಶಂಸಿಸಿದರು.ಕೊಡಗಿನ ಪ್ರೀತಿ ಪಡೆದೆ : ಕೊಡಗಿಗೆ ಓರ್ವ ನ್ಯಾಯಾಧೀಶರಾಗಿ ಕಾರ್ಯನಿರ್ವಹಣೆಯ ಕೆಲಸಕ್ಕೆ ಒಲ್ಲದ ಮನಸ್ಸಿನಿಂದ ಬಂದರೂ; ಕಾವೇರಿ ಮಾತೆಯ ಕೃಪೆಯಿಂದ ಎಲ್ಲಾ ವರ್ಗದ ಜನತೆಯ ಪ್ರೀತಿಯೊಂದಿಗೆ, ನೊಂದವರ ಭಾವನೆಗಳಿಗೆ ಸ್ಪಂದಿಸಿ ನ್ಯಾಯ ದೊರಕಿಸಲು ಸಾಧ್ಯವಾಗಿದ್ದು, ತಮ್ಮ (ಮೊದಲ ಪುಟದಿಂದ) ಜೀವಮಾನದಲ್ಲಿ ಮರೆಯಲಾಗದು ಎಂದು ಅವರು ಅನುಭವ ಹಂಚಿಕೊಂಡರು.

ಜನಪದಕ್ಕೆ ಮಿತಿಯಿಲ್ಲ : ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಅವರು, ಕೃಷ್ಣ, ಏಸು, ಪೈಗಂಬರ್ ಎಲ್ಲರೂ ಜನಪದ ಬದುಕು ಕಂಡವರು, ಕೇವಲ ಆಹಾರ, ಹಾಡುಗಾರಿಕೆ, ಅಡುಗೆ, ಉಡುಗೆ ತೊಡಿಗೆಗಳಿಗೆ ಸೀಮಿತಗೊಳ್ಳದೆ ಭೂಮಿ - ಬಾನು - ಕಡಲು ಸೇರಿದಂತೆ ಸಕಲ ಜ್ಞಾನ ಭಂಡಾರದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟರು. ಈ ದಿಸೆಯಲ್ಲಿ ಜಾನಪದ ದಸರಾ ಕಾರ್ಯಕ್ರಮ ಆಯೋಜಿಸಿರುವದು ಸಾಕಷ್ಟು ಸ್ಫೂರ್ತಿದಾಯಕ ಸಂಗತಿಗಳಿಗೆ ಪ್ರೇರಣೆ ಲಭಿಸುವದಾಗಿದೆ ಎಂದು ಮಾರ್ನುಡಿದರು.

ಮ್ಯೂಸಿಯಂ ಸ್ಥಾಪನೆ : ಕಾಫಿ ಕೃಪಾದಲ್ಲಿ ಹಳೆಯ ವಸ್ತುಗಳ ಮಳಿಗೆಯೊಂದಿಗೆ ಜಾನಪದ ದಸರಾ ಕಾರ್ಯಕ್ರಮಕ್ಕೆ ಕಾರಣಕರ್ತರಾಗಿರುವ ಪೊನ್ನಚ್ಚನ ಮಧು ಸೋಮಣ್ಣ ತನ್ನ ಅನಿಸಿಕೆ ಹಂಚಿಕೊಳ್ಳುತ್ತಾ, ಭವಿಷ್ಯದಲ್ಲಿ ವಿಶಾಲ ಜಾಗದೊಂದಿಗೆ ಕೊಡಗಿಗೆ ಬರುವ ಪ್ರವಾಸಿಗರಿಗೆ ಈ ನಾಡನ್ನು ಪರಿಚಯಿಸುವ ವಸ್ತುಗಳ ‘ಮ್ಯೂಸಿಯಂ’ ಸ್ಥಾಪಿಸುವ ಆಶಯ ವ್ಯಕ್ತಪಡಿಸಿದರು.

ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ ಮಾಹಿತಿ ನೀಡಿ, ಪೊನ್ನಚ್ಚನ ಮಧು ಸ್ವ ಆಸಕ್ತಿಯಿಂದ ಕಳೆದ 3 ವರ್ಷಗಳಲ್ಲಿ ಅಪರೂಪದ ಜಾನಪದ ಪರಿಕರಗಳನ್ನು ಸಂಗ್ರಹಿಸಿ ತನ್ನ ಮಳಿಗೆಯಲ್ಲಿ ಇರಿಸಿದ್ದರು. ಈ ಪರಿಕರಗಳನ್ನು ವ್ಯವಸ್ಥಿತವಾಗಿ ಇದೀಗ ತಾ. 26ರವರೆಗೆ ಸಾರ್ವಜನಿಕ ಪ್ರದರ್ಶನಕ್ಕೆ ತೆರೆಯಲಾಗಿದೆ. ಮಧು ಮತ್ತು ಪ್ರೀತು ದಂಪತಿಯು ಜಾನಪದ ಪರಿಕರಗಳು ಮೂಲೆಗುಂಪಾಗುತ್ತಿರುವುದನ್ನು ಗಮನಿಸಿ ಮುಂದಿನ ಪೀಳಿಗೆಗೆ ತಿಳಿಸಲು ಇವುಗಳನ್ನು ಸಂಗ್ರಹಿಸಿರುವದು ಶ್ಲಾಘನೀಯ ಎಂದರು.

ಬಳಗದ ಸವಿತಾ ರಾಖೇಶ್ ಪ್ರಾರ್ಥನೆಯೊಂದಿಗೆ ಪದಾಧಿಕಾರಿಗಳಾದ ಅಂಬೆಕಲ್ ಕುಶಾಲಪ್ಪ, ನವೀನ್ ಅಂಬೆಕಲ್, ಸಂಪತ್‍ಕುಮಾರ್, ಮುನೀರ್ ಅಹ್ಮದ್, ಸುಶೀಲ ಕುಶಾಲಪ್ಪ, ಜಯಲಕ್ಷ್ಮಿ, ಕವಿತಾ ಮೊದಲಾದವರು ಪಾಲ್ಗೊಂಡಿದ್ದರು. ವೀಣಾಕ್ಷಿ ವಂದಿಸಿದರು.