ಸೋಮವಾರಪೇಟೆ, ಅ. 17: ಪವಿತ್ರ ಕಾವೇರಿ ತೀರ್ಥೋದ್ಭವ ಹಿನ್ನೆಲೆ ಇಲ್ಲಿನ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಪದಾಧಿಕಾರಿ ಗಳು ಸೋಮವಾರಪೇಟೆಯಿಂದ ತಲಕಾವೇರಿಗೆ ಪಾದಯಾತ್ರೆ ಕೈಗೊಂಡಿದ್ದಾರೆ.
ಪ್ರತಿವರ್ಷ ತೀರ್ಥೋದ್ಭವ ದಿನದಂದೇ ತಲಕಾವೇರಿಗೆ ತೆರಳಿ ತೀರ್ಥ ಸಂಗ್ರಹಿಸಿ ಸೋಮವಾರ ಪೇಟೆಯಲ್ಲಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿತ್ತು. ಪ್ರಸಕ್ತ ವರ್ಷ ಜಿಲ್ಲಾಡಳಿತದ ಆದೇಶದ ಹಿನ್ನೆಲೆ ತಾ. 17ರಂದು ಕ್ಷೇತ್ರಕ್ಕೆ ತೆರಳಲು ಸಾಧ್ಯವಾಗದ ಕಾರಣ, ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದು ಅಂಘದ ಅಧ್ಯಕ್ಷ ನಾಗರಾಜ್ ತಿಳಿಸಿದರು.
ತಾ. 18ರಂದು ತಲಕಾವೇರಿ ಯಿಂದ ತೀರ್ಥ ಸಂಗ್ರಹಿಸಿ ತಾ. 19 ರಂದು ಸೋಮವಾರಪೇಟೆಯಲ್ಲಿ ಸಾರ್ವಜನಿಕರಿಗೆ ವಿತರಿಸಲಾಗುವದು ಎಂದರು. ಸಂಘದ ಕಾರ್ಯದರ್ಶಿ ರಾಜಪ್ಪ, ಜಂಟಿ ಕಾರ್ಯದರ್ಶಿ ಅಜಯ್ ಸೇರಿದಂತೆ ಇತರರು ಪಾದಯಾತ್ರೆಯಲ್ಲಿದ್ದಾರೆ.