ಸೋಮವಾರಪೇಟೆ, ಅ. 17: ಪವಿತ್ರ ಕಾವೇರಿ ತೀರ್ಥೋದ್ಭವ ಹಿನ್ನೆಲೆ ಸೋಮವಾರಪೇಟೆ ಪಟ್ಟಣ ದಲ್ಲಿರುವ ಶ್ರೀ ಕಾವೇರಿ ಪ್ರತಿಮೆಗೆ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದಿಂದ ವಿಶೇಷ ಪೂಜೆ ನೆರವೇರಿಸಲಾಯಿತು.

ದೈವ ನಂಬಿಕೆ ಹೊಂದಿರುವ ಪ್ರತಿಯೋರ್ವರಿಗೂ ಕಾವೇರಿ ಪೂಜನೀಯ. ಇಂತಹ ಸ್ಥಳದ ಬಗ್ಗೆ ಇಲ್ಲಸಲ್ಲದ ಗೊಂದಲ ಸೃಷ್ಟಿಸುವದು ಸರಿಯಲ್ಲ ಎಂದು ಅಭಿಪ್ರಾಯಿಸಿದರು.

ಈ ಸಂದರ್ಭ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್, ನಗರ ಘಟಕದ ಕೆ.ಪಿ. ರವೀಶ್, ಅಭಿಮಾನಿಗಳ ಸಂಘದ ಕಾರ್ಯದರ್ಶಿ ರಾಜಪ್ಪ, ಉಪಾಧ್ಯಕ್ಷ ಆನಂದ್, ಪ್ರಕಾಶ್, ಮೂರ್ತಿ, ಪುನೀತ್, ಕುಮಾರ್, ಹರೀಶ್, ಪ್ರಸನ್ನ ಸೇರಿದಂತೆ ಇತರರು ಉಪಸ್ಥಿತರಿದ್ದರು.