ಸಿದ್ದಾಪುರ, ಅ. 17: ಜವಹರ್‍ಲಾಲ್ ನೆಹರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿ ನಜೀಬ್ ಅಹ್ಮದ್ ನಿಗೂಢವಾಗಿ ನಾಪತ್ತೆಯಾಗಿ ನಾಲ್ಕು ವರ್ಷಗಳು ಕಳೆದರೂ ವಿದ್ಯಾರ್ಥಿಯ ಪತ್ತೆಗಾಗಿ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಫ್ರಟೆರ್ನಿಟಿ ಮೂವ್ಮೆಂಟ್ ಕೊಡಗು ಸಮಿತಿಯ ವತಿಯಿಂದ ಸಿದ್ದಾಪುರದಲ್ಲಿ ಪ್ರತಿಭಟನೆ ನಡೆಸಿದರು.
ಎಂ.ಜಿ. ರಸ್ತೆಯ ಹಿರಾ ಮಸೀದಿಯ ಮುಂಭಾಗದಲ್ಲಿ ಜಮಾಯಿಸಿದ ಕಾರ್ಯಕರ್ತರು ಜೆ.ಎನ್.ಯು. ವಿಶ್ವವಿದ್ಯಾನಿಲಯದಲ್ಲಿ ಎಬಿವಿಪಿ ಕಾರ್ಯಕರ್ತರಿಂದ ತೀವ್ರ ಹಲ್ಲೆಗೊಳಗಾದ ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆಯಾಗಿ ನಾಲ್ಕು ವರ್ಷಗಳು ಕಳೆದರೂ ಯಾವುದೇ ತನಿಖೆಗೆ ಮುಂದಾಗದ ಸರ್ಕಾರದ ಕ್ರಮದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಫ್ರಟೆರ್ನಿಟಿ ಮೂವ್ಮೆಂಟ್ ಕೊಡಗು ಘಟಕದ ಕಾರ್ಯದರ್ಶಿ ಮುಹಮ್ಮದ್ ರಿಜ್ವಾನ್, ಪ್ರಮುಖರಾದ ಎನ್.ಎ. ಅಬ್ದುಲ್ ಗಫೂರ್, ಗಫೂರ್ ಉಳಿಯಿಲ್ ಮತ್ತಿತರರು ಇದ್ದರು.