ಸಿದ್ದಾಪುರ, ಅ. 17: ಪಾಲಿಬೆಟ್ಟ ಗ್ರಾಮ ಪಂಚಾಯಿತಿಗೆ ಸೇರಿದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿ ಅಪಾರ ನಷ್ಟ ಸಂಭವಿಸಿದೆ ಪಾಲಿಬೆಟ್ಟ ಗ್ರಾಮ ಪಂಚಾಯಿತಿ ವತಿಯಿಂದ ಕಳೆದ ಕೆಲವು ವರ್ಷಗಳ ಹಿಂದೆ ವೈಜ್ಞಾನಿಕ ವಾಗಿ ಕಸವಿಲೇವಾರಿ ಮಾಡಲು ಘಟಕ ಪ್ರಾರಂಭಿಸಲಾಗಿತ್ತು. ಈ ಘಟಕವು ಶನಿವಾರದಂದು ಆಕಸ್ಮಿಕವಾಗಿ ಬೆಂಕಿಗೆ ಆಹುತಿ ಯಾಗಿವೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮಾಡಿರುವ ಕಸ ವಿಲೇವಾರಿ ಘಟಕವನ್ನು ಈ ಹಿಂದೆ ಕೇಂದ್ರ ಸ್ವಚ್ಛತಾ ಭಾರತ ಅಭಿಯಾನದ ಸಮಿತಿಯೊಂದು ಆಗಮಿಸಿ ಇದನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು ಉತ್ತಮ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ಪಂಚಾಯಿತಿ ವತಿಯಿಂದ ವೈಜ್ಞಾನಿಕವಾಗಿ ಸಣ್ಣ ಜಾಗದಲ್ಲಿ ವ್ಯವಸ್ಥಿತವಾಗಿ ಮಾಡ ಲಾಗಿತ್ತು ಆದರೆ ಶನಿವಾರದಂದು ಬೆಳಿಗ್ಗೆ ಅಂದಾಜು ಒಂಬತ್ತು ಗಂಟೆಗೆ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಈ ಬಗ್ಗೆ ಸ್ಥಳೀಯರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ರವರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ವಿಶ್ವನಾಥ್ ಭೇಟಿ ನೀಡಿ ಪರಿಶೀಲಿಸಿದರು ನಂತರ ಸಿದ್ದಾಪುರ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟಕಕ್ಕೆ ಬೆಂಕಿ ಹಿಡಿದ ಪರಿಣಾಮ ಅಂದಾಜು ಮೂರು ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಅಲ್ಲದೆ ಘಟಕದಲ್ಲಿ ಇದ್ದ ವಿಲೇವಾರಿ ಮಾಡಿದ ಕಸಗಳು ಕೂಡ ಸುಟ್ಟು ಹೋಗಿರುತ್ತದೆ ಘಟಕಕ್ಕೆ ಯಾವ ರೀತಿಯಲ್ಲಿ ಬೆಂಕಿ ತಗಲಿದೆ ಎಂದು ಪೆÇಲೀಸರ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಾಗಿದೆ - ವಾಸು