ವೀರಾಜಪೇಟೆ ವರದಿ, ಅ. 16: ಚಾಮುಂಡೇಶ್ವರಿ ವಿಧ್ಯುಚ್ಛಕ್ತಿ ಸರಬರಾಜು ನಿಗಮ ನಿಯಮಿತದ ವೀರಾಜಪೇಟೆ ಉಪ ವಿಭಾಗದಿಂದ ರೂ. 21 ಲಕ್ಷ ವಿದ್ಯುತ್ ಶುಲ್ಕ ಒಂದೇ ದಿನ ಸಂಗ್ರ್ರಹವಾಗಿದೆ. ವೀರಾಜಪೇಟೆ ಉಪ ವಿಭಾಗಕ್ಕೆ ಒಳಪಡುವ ಪಾಲಿಬೆಟ್ಟ, ಸಿದ್ದಾಪುರ ಹಾಗೂ ವೀರಾಜಪೇಟೆಯಲ್ಲಿ ವಿದ್ಯುತ್ ಶುಲ್ಕ ಬಾಕಿ ವಸೂಲಾತಿ ಅಭಿಯಾನವನ್ನು ಹಮ್ಮಿಕೊಂಡ ಒಂದೇ ದಿನದಲ್ಲಿ ಸುಮಾರು ರೂ. 21 ಲಕ್ಷ ಸಂಗ್ರಹ ಮಾಡಲಾಗಿದೆ ಎಂದು ಸೆಸ್ಕ್ ಅಧಿಕಾರಿಗಳು ತಿಳಿಸಿದ್ದಾರೆ. ದಿನವೊಂದಕ್ಕೆ ಸರಿ ಸುಮಾರು ರೂ. 4 ರಿಂದ ರೂ. 5 ಲಕ್ಷ ಸಂಗ್ರಹವಾಗುತ್ತಿತು. ಆದರೆ ಇಂದಿನ ಅಭಿಯಾನದಿಂದ ರೂ. 21 ಲಕ್ಷ ಸಂಗ್ರಹವಾಗಿದೆ. ಎಲ್ಲ ಸಂದರ್ಭಗಳಲ್ಲಿ ಗ್ರಾಹಕರ ಸಹಕಾರ ಅಗತ್ಯ ಎಂದು ಸೆಸ್ಕ್ ಅಧಿಕಾರಿ ತಿಳಿಸಿದ್ದಾರೆ.