ಮಡಿಕೇರಿ, ಅ. 11: ಜಿಲ್ಲೆಯಲ್ಲಿ ಹೊಸದಾಗಿ 45 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 3697 ಪ್ರಕರಣಗಳು ವರದಿಯಾಗಿದ್ದು, 3094 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 54 ಮಂದಿ ಸಾವನ್ನಪ್ಪಿದ್ದು 549 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ 138 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 53 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ, 358 ಮಂದಿ ಹೋಮ್ ಐಸೋಲೇಷÀನ್‍ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 621 ನಿಯಂತ್ರಿತ ವಲಯಗಳಿವೆ.