190 ಮಂದಿ ಭಾಗಿ ಗೋಣಿಕೊಪ್ಪ, ಅ. 11: ಮಾಯಮುಡಿ ಐರನ್ ಸೈಟ್ ಶೂಟರ್ಸ್ ವತಿಯಿಂದ ಮಾಯಮುಡಿ ಸರ್ಕಾರಿ ಶಾಲಾ ಮೈದಾನದಲ್ಲಿ ಕೈಲ್ ಪೊಲ್ದ್ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಸುಮಾರು 190 ಸ್ಪರ್ಧಿಗಳು ಭಾಗವಹಿಸಿದ್ದರು.ಹೊರ ಜಿಲ್ಲೆಗಳಿಂದಲೂ ಸ್ಪರ್ಧಿಗಳು ಭಾಗವಹಿಸಿದ್ದರು. ಮಹಿಳೆಯರು, ಮಕ್ಕಳು ಭಾಗವಹಿಸಿ ತೆಂಗಿನಕಾಯಿಗೆ ಗುಂಡು ಹೊಡೆದು ಸಂಭ್ರಮಿಸಿದರು. ಉದ್ಘಾಟನೆ ಸಂದರ್ಭ ಪದ್ಮಶ್ರೀ ಪುರಸ್ಕøತ ಮೊಳ್ಳೇರ ಪಿ. ಗಣೇಶ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಸುಧೀರ್, ಕಾಫಿ ಬೆಳೆಗಾರ ಚೆಪ್ಪುಡೀರ ಕಿಟ್ಟು ಅಯ್ಯಪ್ಪ, ಚೆಪ್ಪುಡೀರ ರಾಧಾ ಅಚ್ಚಯ್ಯ, ಯೋಜನಾ ನಿರ್ದೇಶಕ ಆಪಟ್ಟೀರ ಅಯ್ಯಪ್ಪ, ಸಂಚಾಲಕ ಕಂಜಿತಂಡ ಡಬ್ಲ್ಯೂ ಪೊನ್ನಪ್ಪ, ಸಲಹೆಗಾರ ಆಪಟೀರ ಟಾಟು ಮೊಣ್ಣಪ್ಪ ಉಪಸ್ಥಿತರಿದ್ದರು.ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಐರನ್ ಸೈಟ್ ಶೂಟರ್ಸ್ ವತಿಯಿಂದ ನಡೆದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಅರಂಬೂರು ರಾಹುಲ್ ಚಾಂಪಿ ಯನ್ ಆಗಿ ಹೊರಹೊಮ್ಮಿದರು. ಮಂಡುಡ ಅಜಿತ್ ದ್ವಿತೀಯ, ಕಲಿಯಂಡ (ಮೊದಲ ಪುಟದಿಂದ) ಸಜನ್ ಅಯ್ಯಪ್ಪ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ನಗದು ಹಾಗೂ ಟ್ರೋಫಿ ನೀಡಲಾಯಿತು. ಸಮಾರೋಪದಲ್ಲಿ ಕಾಫಿ ಬೆಳೆಗಾರರಾದ ಟಿಪ್ಪು ಬಿದ್ದಪ್ಪ, ಚಿರಿಯಪಂಡ ರಾಜಾ ನಂಜಪ್ಪ ಬಹುಮಾನ ವಿತರಿಸಿದರು.