ಮಡಿಕೇರಿ, ಅ. 11: ಮಂಗಳೂರು ವಿಶ್ವವಿದ್ಯಾನಿಲಯದ ಅಧೀನ ಸಂಸ್ಥೆಯಾದ ಸರ್ವೋದಯ ಕಾಲೇಜ್ ಆಫ್ ಎಜುಕೇಶನ್ ವತಿಯಿಂದ ರಾಷ್ಟ್ರಮಟ್ಟದ ವಿಚಾರ ಸಂಕಿರಣವು ವೆಬಿನಾರ್ ಮೂಲಕ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಗಳೂರು ಸಂತ ಅಣ್ಣಮ್ಮ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ವಿಜಯಕುಮಾರಿ ‘ರಾಷ್ಟ್ರೀಯ ಶೈಕ್ಷಣಿಕ ನೀತಿ ಕೌಶಲ್ಯಗಳ ದೃಷ್ಟಿಕೋನಗಳು’ ಎಂಬ ವಿಷಯದ ಕುರಿತು ವಿಷಯ ಮಂಡನೆ ಮಾಡಿದರು. ಐಕ್ಯುಎಸಿ ಸಂಯೋಜಕ ಮಣಿ ಕೆ.ಜೆ., ಪ್ರಾಂಶುಪಾಲೆ ಡಾ. ವಾಣಿ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು.