ವೀರಾಜಪೇಟೆ ಅ. 12: ವೀರಾಜಪೇಟೆ ತಾಲೂಕಿನಲ್ಲಿ ಡಿಜಿಟಲ್ ಮೂಲಕ ಸೇವೆ ಸಲ್ಲಿಸಲು ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಸರಕಾರ ಸ್ಮಾರ್ಟ್ ಫೋನ್ ಜಾರಿಗೆ ತಂದಿದೆ. ಅಂಗನವಾಡಿ ಕಾರ್ಯಕರ್ತೆಯರು ಸ್ಮಾರ್ಟ್ಫೋನ್ ಸದ್ಭಳಕೆ ಮಾಡಿಕೊಂಡು ನಿಷ್ಠಾವಂತ ಸೇವೆ ಸಲ್ಲಿಸಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಪೊನ್ನಂಪೇಟೆಯ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಇಲ್ಲಿನ ಪುರಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೋಪಯ್ಯ ಕಾರ್ಯಕರ್ತೆಯರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾಲಕ್ಷ್ಮಿ, ಪೋಸನ್ ಅಭಿಯಾನ ಯೋಜನೆಯ ತಾಲೂಕು ಸಂಯೋಜಕ ಕೀರ್ತನ್, ಸಹಾಯಕ ವಿನ್ಸಿ, ಸಿ.ಡಿ.ಪಿ.ಒ. ಮತ್ತಿತರ ಅಧಿಕಾರಿಗಳು ಹಾಜರಿದ್ದರು.