ಸುಂಟಿಕೊಪ್ಪ, ಅ. 12: ಇಲ್ಲಿಗೆ ಸಮೀಪದ ಮಾದಾಪುರ ಪಟ್ಟಣದಲ್ಲಿ ಸಂತೆ ದಿನವಾದ ಶನಿವಾರ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪಟ್ಟಣದ ಸಾರ್ವಜನಿಕರಲ್ಲಿ ಕೋವಿಡ್-19 ಮಹಾಮಾರಿಯ ಬಗ್ಗೆ ಜನ ಜಾಗೃತಿ ಮೂಡಿಸಿ ಮಾಸ್ಕ್ ವಿತರಿಸಿದರು. ಈ ಸಂದರ್ಭ ಮಾತನಾಡಿದ ಅವರು ಲಾಕ್ ಡೌನ್ ಸ್ಥಗಿತಗೊಂಡ ನಂತರ ಜನರಲ್ಲಿ ಕೊರೊನಾ ಬಗ್ಗೆ ನಿರ್ಲಕ್ಷ್ಯ ಭಾವನೆ ಹೆಚ್ಚಾಗುತ್ತಿದೆ. ಇದರಿಂದ ರೋಗ ಅಧಿಕವಾಗಿ ಜನರು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಅಧಿಕವಾಗುತ್ತಿದ್ದು ಇದರ ಸಲುವಾಗಿ ಎಲ್ಲರಿಗೂ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಿ ಸರಕಾರದಿಂದ ವಿಧಿಸುವ ದಂಡವನ್ನು ತಪ್ಪಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸರಕಾರ ಮಾಸ್ಕ್ ಧರಿಸದವರಿಗೆ ವಿಧಿಸುವ ದಂಡದಿಂದ ಸರಕಾರ ನÀಡೆಸಲಾಗುತ್ತಿದೆ. ಎಂದು ವಿರೋಧ ಪಕ್ಷದಿಂದ ಅಪಪ್ರಚಾರ ಮಾಡಲಾಗುತ್ತಿದೆ. ಇದು ಕೈಲಾಗದವರು ಮೈ ಪರಚಿಕೊಳ್ಳುತ್ತಿರುವುದು ಎಂದರು. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಟಿ.ಪಿ. ಸಂದೇಶ್. ಬಿ.ಜೆ.ಪಿ. ನಗರ ಅಧ್ಯಕ್ಷ ನಾಪಂಡ ಉಮೇಶ್ (ಉತ್ತಪ್ಪ), ಕಾರ್ಯಕರ್ತರಾದ ಕೊಪ್ಪತ್ತಂಡ ಗಣೇಶ್. ಮಧು ತಿಲಕ್ಕುಮಾರ್, ಮಾದಾಪುರ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕ ಕಾರಿಯಪ್ಪ, ಮಾದಾಪುರ ಉಪಠಾಣೆಯ ಎ.ಎಸ್.ಐ ಪೊನ್ನಪ್ಪ, ಇತರರು ಹಾಜರಿದ್ದರು.