ಚೆಟ್ಟಳ್ಳಿ, ಅ. 12: ಎಸ್‍ಎಸ್‍ಎಫ್ ಕೊಡಗು ಜಿಲ್ಲಾ ಸಮಿತಿಯ ನಿರ್ದೇಶನದಂತೆ ಎಲ್ಲಾ ವಿಭಾಗಗಳಲ್ಲಿಯೂ ನಡೆಸಿಕೊಂಡುಬರುವ ‘ವೈಟಲೈಝ್’ ಡಿವಿಷನ್ ಹಾಗೂ ಸೆಕ್ಟರ್ ನಾಯಕರಿಗೆ ನಡೆಯುವ ಸಾಂಘಿಕ ತರಬೇತಿಯು ಎಸ್‍ಎಸ್‍ಎಫ್ ಸೋಮವಾರಪೇಟೆ ಡಿವಿಷನ್ ವತಿಯಿಂದ ಸುಂಟಿಕೊಪ್ಪ ಇಹ್ಸಾನಿಯಾ ಶರೀಅತ್ ಕಾಲೇಜಿನಲ್ಲಿ ನಡೆಯಿತು. ಸೋಮವಾರಪೇಟೆ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ರಫೀಕ್ ಸಹದಿ ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮವನ್ನು ಎಸ್‍ವೈಎಸ್ ಸೆಂಟರ್ ಕಾರ್ಯದರ್ಶಿ ರಝಾಕ್ ಸಹದಿ ಉಸ್ತಾದ್ ಉದ್ಘಾಟಿಸಿದರು. ಎಸ್‍ಎಸ್‍ಎಫ್ ಸೋಮವಾರಪೇಟೆ ಡಿವಿಷನ್ ಅಧ್ಯಕ್ಷ ಕಮರುದ್ದೀನ್ ಅನ್ವಾರಿ ಅಸ್ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಎಸ್‍ವೈಎಸ್ ಜಿಲ್ಲಾ ನಾಯಕ ಹಸೈನಾರ್ ಮುಸ್ಲಿಯಾರ್ ಹಾಗೂ ಎಸ್‍ಎಸ್‍ಎಫ್ ಕಾರ್ಯದರ್ಶಿ ರಹೀಂ ಭಾಗವಹಿಸಿದ್ದರು. ಎಸ್‍ಎಸ್‍ಎಫ್ ಜಿಲ್ಲಾ ಉಪಾಧ್ಯಕ್ಷ ಶಾಫಿ ಸಅದಿ ನೇತೃತ್ವ ವಹಿಸಿದ್ದರು. ನಂತರ ನಡೆದ ಸಾಂಘಿಕ ತರಬೇತಿಯು ಎಸ್.ವೈ.ಎಸ್ ರಾಜ್ಯ ಟೀಂ ಇಸಾಬ ಡೈರೆಕ್ಟರ್ ಉಮರ್ ಸಖಾಫಿ ಉಸ್ತಾದ್ ನಡೆಸಿದರು ನಾಯಕರಿಗೆ ಬೇಕಾದ ಗುಣಗಳು, ಅರ್ಹತೆಗಳು ಹಾಗೂ ಕಾರ್ಯಾಚರಣೆಗಳ ಕುರಿತು ಹಾಗೂ ಕಾರ್ಯಕರ್ತನ ಆಧ್ಯಾತ್ಮಿಕತೆಯ ಕುರಿತು ತರಗತಿ ನಡೆಸಿದರು. ಜಿಲ್ಲಾ ಡಿವಿಷನ್ ಹಾಗೂ ಸೆಕ್ಟರ್ ನಾಯಕರು ಉಪಸ್ಥಿತರಿದ್ದರು. ಎಸ್.ಎಸ್.ಎಫ್ ಸೋಮವಾರಪೇಟೆ ಡಿವಿಷನ್ ಕಾರ್ಯದರ್ಶಿ ಶಿಹಾಬ್ ತಂಙಳ್ ಸ್ವಾಗತಿಸಿ ವಿಸ್ಡಂ ಕಾರ್ಯದರ್ಶಿ ಉಮರ್ ಮಾಸ್ಟರ್ ವಂದಿಸಿದರು.