ಕುಶಾಲನಗರ, ಅ. 12: ಪ್ರಕೃತಿ ಮತ್ತು ಪರಿಸರದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸುವಂತಾಗಬೇಕು ಎಂದು ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಮತ್ತು ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಕರೆ ನೀಡಿದ್ದಾರೆ.

ಕುಶಾಲನಗರ ಕಾವೇರಿ ಪರಿಸರ ರಕ್ಷಣಾ ಬಳಗದ ವತಿಯಿಂದ ನಡೆದ ಗಿಡ, ಮರಗಳ ಹುಟ್ಟುಹಬ್ಬ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ಮಹದೇವ ನಾಯಕ್, ಪರಿಸರ ರಕ್ಷಣಾ ಬಳಗದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಪ.ಪಂ. ಸದಸ್ಯರಾದ ಪ್ರಮೋದ್ ಮುತ್ತಪ್ಪ, ಕೆ.ಜಿ. ಮನು ಕುಡಾ ಸದಸ್ಯರಾದ ವೈಶಾಖ್, ರಾಣು ಅಪ್ಪಣ್ಣ, ಬಳಗದ ಪ್ರಮುಖರಾದ ಡಿ.ಆರ್. ಸೋಮಶೇಖರ್, ಬಿ.ಜೆ. ಅಣ್ಣಯ್ಯ, ಶಿವಾಜಿ, ಎಂ.ಡಿ. ಕೃಷ್ಣಪ್ಪ, ಮಂಜುನಾಥ್, ವನಿತಾ ಚಂದ್ರಮೋಹನ್, ತೋರೇರ ಉದಯಕುಮಾರ್, ಕೊಡಗನ ಹರ್ಷ ಇದ್ದರು.