*ಕೊಡ್ಲಿಪೇಟೆ, ಅ. 12: ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಮಾರಾಟ-ಸೇವನೆಯಂತಹ ಪ್ರಕರಣಗಳು ಕಂಡು ಬಂದರೆ ತಕ್ಷಣ ಪೆÇಲೀಸ್ ಇಲಾಖೆಗೆ ಮಾಹಿತಿ ನೀಡಿ. ಅಕ್ರಮಗಳಿಗೆ ಕಡಿವಾಣ ಹಾಕಲು ಪೆÇಲೀಸ್ ಇಲಾಖೆ ಬದ್ಧವಾಗಿದೆ ಎಂದು ಸೋಮವಾರಪೇಟೆ ಪೆÇಲೀಸ್ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್ ಹೇಳಿದರು.

ಇಲ್ಲಿನ ಪೆÇಲೀಸ್ ಉಪ ಠಾಣೆಯಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದ್ದು, ಅಕ್ರಮ ದಂಧೆ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ಇಲಾಖೆಯ ಗಮನ ಸೆಳೆದ ಸಂದರ್ಭ ಮಾತನಾಡಿದ ವೃತ್ತ ನಿರೀಕ್ಷಕರು, ಗಾಂಜಾ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಇಲಾಖೆ ಕಾರ್ಯೋನ್ಮುಖವಾಗಿದೆ. ಈ ದಂಧೆಗೆ ಕಡಿವಾಣ ಹಾಕುವ ಕಾರ್ಯಾಚರಣೆಗೆ ಇನ್ನಷ್ಟು ಚುರುಕು ಮುಟ್ಟಿಸಲಾಗುವದು ಎಂದರು.

ಕೊಡ್ಲಿಪೇಟೆಯಲ್ಲಿ ಪೆÇಲೀಸ್ ವಸತಿ ಗೃಹ ನಿರ್ಮಾಣ ,ವಾಹನ ಪಾಕಿರ್ಂಗ್ ಸಮಸ್ಯೆ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಇತರ ಸಮಸ್ಯೆಗಳ ಕುರಿತು ಸಾರ್ವಜನಿಕರು ಸಭೆಯಲ್ಲಿ ವಿವರಿಸಿದರು.

ಜನರಿಗೆ ಇಲಾಖೆಯೊಂದಿಗಿನ ಬಾಂಧವ್ಯ ವೃದ್ಧಿಸಲು ಈ ಸಭೆ ಆಯೋಜಿಸಲಾಗಿದ್ದು, ವಸತಿ ಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ವ್ಯವಹರಿಸಲು ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗುವದು. ಅಕ್ರಮವಾಗಿ ಮದ್ಯ ಮಾರಾಟ ಪ್ರಕರಣಗಳ ಬಗ್ಗೆ ಕಟ್ಟುನಿಟ್ಟಿನ ಕಾನೂನು ಕ್ರಮ ಕ್ಯೆಗೊಳ್ಳಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದರು.

ವಾಹನ ಪಾಕಿರ್ಂಗ್ ಸಮಸ್ಯೆಯನ್ನು ಬಗೆಹರಿಸಲು ಸ್ಥಳಾವಕಾಶ ಹಾಗೂ ಸ್ಥಿತಿಗತಿಗಳ ಮಾಹಿತಿ ಪಡೆದು ಸ್ಥಳೀಯ ಆಡಳಿತದೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವದಾಗಿ ವೃತ್ತ ನಿರೀಕ್ಷಕರು ಭರವಸೆ ನೀಡಿದರು.

ಸಭೆಯಲ್ಲಿ ಉಪ ಠಾಣೆಯ ಎ.ಎಸ್.ಐ. ಕೃಷ್ಣೇಗೌಡ, ಹೇಮಾವತಿ ರೋಟರಿ ಅಧ್ಯಕ್ಷ ದಿವಾಕರ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಯತೀಶ್ ಕುಮಾರ್, ಜಿಲ್ಲಾ ನಿರ್ದೇಶಕ ಸುಬ್ರಮಣ್ಯ ಜಿ.ಆರ್, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಭಗವಾನ್ ಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಔರಂಗ್ ಜೇಬ್, ಹಿರಿಯ ಸದಸ್ಯರಾದ ಚಂದ್ರಶೇಖರ್, ವಿ.ಎಸ್.ಎಸ್.ಎನ್. ಬ್ಯಾಂಕ್ ಉಪಾಧ್ಯಕ್ಷ ಬಿ.ಕೆ. ಯತೀಶ್, ನಿರ್ದೇಶಕ ಸುಬಮಣ್ಯ ಆಚಾರ್, ದಲಿತ ಮುಖಂಡರಾದ ಜೆ.ಎಲ್. ಜನಾರ್ದನ್, ಪ್ರಮುಖರಾದ ಲತೀಫ್, ರಾಜಶೇಖರ್, ಮಸ್ಜಿದುನ್ನೂರ್ ಹ್ಯಾಂಡ್ಪೋಸ್ಟ್ ಕಾರ್ಯದರ್ಶಿ ಮಹಮ್ಮದ್ ಹನೀಫ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಕೊಡ್ಲಿಪೇಟೆ ಉಪಠಾಣೆಯ ಮುಖ್ಯಪೇದೆ ಡಿಂಪಲ್, ಪೆÇಲೀಸ್ ಸಿಬ್ಬಂದಿಗಳಾದ ಹರೀಶ್, ಕುಮಾರ್, ಪ್ರಶಾಂತ್ ಪಾಟೀಲ ,ಈಚಲಪುರ ಹರೀಶ್ ಅವರುಗಳು ಉಪಸ್ಥಿತರಿದ್ದರು.