ಕುಶಾಲನಗರ, ಅ. 12: ಕೊಡಗಿನ ಹಿರಿಯ ಕಲಾವಿದ ಕುಶಾಲನಗರದ ನಿವಾಸಿ ಅಬ್ದುಲ್ ಹಫೀಜ್ ಸಾಗರ್ (74) ಹೃದಯಾಘಾತದಿಂದ ಸೋಮವಾರ ನಿಧನರಾದರು.

ಕೊಡಗು ಲೇಖಕ ಕಲಾವಿದರ ಬಳಗದಲ್ಲಿ ಸದಸ್ಯರಾಗಿದ್ದ ಮೃತರು ಸಾಂಸ್ಕøತಿಕ ಲೋಕದಲ್ಲಿ ಕೂಡ ತೊಡಗಿಸಿಕೊಂಡು ಹಲವು ಪ್ರಶಸ್ತಿಗಳಿಗೆ ಕೂಡ ಭಾಜನರಾಗಿದ್ದರು. ಸ್ವತಃ ಹಾಡುಗಾರರಾಗಿದ್ದ ಹಫೀಜ್ ಧಾರವಾಹಿಯಲ್ಲಿ ಕೂಡ ನಟನೆ ಮಾಡಿದ್ದರು. ಮಡಿಕೇರಿಯಲ್ಲಿ ಕುವೆಂಪು ಪುತ್ಹಳಿ ಸ್ಥಾಪನೆಗೂ ಬೆನ್ನೆಲುಬಾಗಿದ್ದ ಇವರು ಟಿಪ್ಪು ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷರು ಕೂಡ ಆಗಿದ್ದರು. ಮೃತರು ಪತ್ನಿ ಮಡಿಕೇರಿ ಪುರಸಭೆಯ ಮಾಜಿ ಸದಸ್ಯೆ ತಾಹಿರ ಸೇರಿದಂತೆ ಮೂವರು ಮಕ್ಕಳನ್ನು ಅಗಲಿದ್ದಾರೆ.