ಮಡಿಕೇರಿ, ಅ. 12: ಜಿಲ್ಲೆಯ ಅರಣ್ಯ ಇಲಾಖಾ ಉಪ ವಲಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ನಿಯೋಜಿಸಲಾಗಿದೆ. ಮುಂಡ್ರೋಟು ವಲಯ ಉಪ ವಲಯ ಅರಣ್ಯಾಧಿಕಾರಿ ಸಿ.ಡಿ. ಬೋಪಣ್ಣ ಅವರನ್ನು ಪೊನ್ನಂಪೇಟೆ ವಲಯ ಕುಟ್ಟ ಶಾಖೆಗೆ, ಸೋಮವಾರಪೇಟೆ ವಲಯ ಶಾಂತಳ್ಳಿ ಶಾಖೆಯ ಬಿ.ಎಸ್. ಚಂದ್ರೇಶ್ ಅವರನ್ನು ಮಡಿಕೇರಿ ಅರಣ್ಯ ಸಂಚಾರಿ ದಳದ ಸರ್ವೆ ಶಾಖೆಗೆ, ಅರಣ್ಯ ಸಂಚಾರಿ ದಳದ ಕೆ.ಎನ್. ದೇವಯ್ಯ ಅವರನ್ನು ಕುಶಾಲನಗರ ವಲಯ ಆನೆಕಾಡು ಶಾಖೆಗೆ, ಆನೆಕಾಡು ಶಾಖೆಯ ಮಹದೇವನಾಯಕ್ ಅವರನ್ನು ಕುಶಾಲನಗರ ವಲಯ ಆನೆಕಾಡು ಡಿಪೋಗೆ ವರ್ಗಾವಣೆ ಮಾಡಿ ನಿಯೋಜಿಸಲಾಗಿದೆ.