ಗುಡ್ಡೆಹೊಸೂರು, ಅ. 9: ಬಸವನಹಳ್ಳಿಯ ಬೂತ್ ಮಟ್ಟದ ಸಭೆಯಲ್ಲಿ ಉದ್ಯಮಿ ಕೃಷ್ಣಮೂರ್ತಿ ಮತ್ತು ರೈತ ಮುಖಂಡ ಬಿ.ಬಿ. ಮಹೇಶ್ ಅವರು ಎಂ.ಆರ್. ಮಾದಪ್ಪ ಅವರ ಸಮ್ಮುಖದಲ್ಲಿ ಬಿ.ಜೆ.ಪಿ.ಗೆ ಸೇರ್ಪಡೆಗೊಂಡರು. ಪಕ್ಷದ ಮುಖಂಡರಾದ ಬಿ.ಕೆ. ಮೋಹನ್, ಮಧು, ಮನು, ಮಹೇಂದ್ರ, ಕುಮಾರ್, ತಾಲೂಕು ಎಸ್ಟಿ ಮೋರ್ಚಾದ ಅಧ್ಯಕ್ಷ ಸುಬ್ರಮಣಿ ಮುಂತಾದವರು ಹಾಜರಿದ್ದರು.