ಕುಶಾಲನಗರ, ಅ. 9: ಕುಶಾಲನಗರದ ಡಾ.ಚೈತ್ರ ನಾರಾಯಣ್ ಅವರನ್ನು ಮೈಸೂರು ವಿವಿಯ ಸಿಂಡಿಕೇಟ್ ಸದಸ್ಯರಾಗಿ ಸರಕಾರ ನಾಮನಿರ್ದೇಶನಗೊಳಿಸಿದೆ. ಕರ್ನಾಟಕ ರಾಜ್ಯ ವಿವಿಗಳ ಕಾಯ್ದೆ 2000 ಅನ್ವಯ ಡಾ.ಚೈತ್ರ ನಾರಾಯಣ್ ನಾಮನಿರ್ದೇಶನಗೊಂಡಿದ್ದು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸುವಂತೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ಸೂಕ್ಷ್ಮಜೀವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಹೊಂದಿರುವ ಚೈತ್ರ ಕುಶಾಲನಗರದ ಗುತ್ತಿಗೆದಾರರಾಗಿದ್ದ ದಿ.ರಾಮಶೆಟ್ಟಿ ಅವರ ಮೊಮ್ಮಗಳಾಗಿದ್ದು ಕುಶಾಲನಗರದಲ್ಲಿ ಪ್ರಾಥಮಿಕ ವ್ಯಾಸಂಗ ಮಾಡಿದ್ದರು. ಚೈತ್ರ ಅವರನ್ನು ಸಂಸದ ಪ್ರತಾಪ್‍ಸಿಂಹ ಅಭಿನಂದಿಸಿದ್ದಾರೆ.