ವೀರಾಜಪೇಟೆ, ಅ. 8: ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ದಲಿತ ಯುವತಿ ಮೇಲಿನ ಅತ್ಯಾಚಾರ ನಡೆಸಿ ಬರ್ಬರ ಹತ್ಯೆ ಮಾಡಿದ ಆರೋಪಿ ಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ತಾಲೂಕಿನ ಐಕ್ಯ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳು ಇಂದು ತಾಲೂಕು ಕಚೇರಿ ಮುಂದೆ ಮೂರು ಗಂಟೆಗಳ ಧರಣಿ ಮುಷ್ಕರ ಪ್ರತಿಭಟನೆ ನಡೆಸಿದರು.

ಸಿಪಿಐ ಪಕ್ಷದ ಜಿಲ್ಲಾ ಸಂಚಾಲಕ ಕೆ.ವಿ. ಸುನೀಲ್, ದಲಿತ ಸಂಘರ್ಷ ಸಮಿತಿಯ ಪ್ರಾಂತೀಯ ಸಂಚಾಲಕ ಬೆಳ್ಳೂರು ಕೃಷ್ಣಪ್ಪ, ಜಿಲ್ಲಾ ಸಂಚಾಲಕ ಎಚ್.ಆರ್. ಪರಶುರಾಮ್, ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷೆ ಪಡಿಕಲ್ ಕುಸುಮಾವತಿ, ಕಾರ್ಯದರ್ಶಿ ಮಾಚಿಮಾಡ ವಾಣಿ, ಕಾಂಗ್ರೆಸ್‍ನ ಎಸ್.ಟಿ., ಎಸ್.ಸಿ. ಘಟಕದ ಜಿಲ್ಲಾ ಸಮಿತಿ ಅಧ್ಯಕ್ಷ ವಿ.ಕೆ. ಸತೀಶ್ ಕುಮಾರ್, ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದದ ಜಿಲ್ಲಾ ಸಂಚಾಲಕ ಹೆಚ್.ಆರ್. ಶಿವಣ್ಣ, ಸಮಾಜ ಸೇವಕಿ ರುಬೀನಾ ಶಮಿಯುಲ್ಲಾ, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಮಹಮ್ಮದ್ ರಾಫಿ, ಎಸ್.ಎಚ್. ಮತೀನ್, ಡಿ.ಪಿ. ರಾಜೇಶ್ ಮಾತನಾಡಿದರು. ಜೆ.ಡಿ.ಎಸ್‍ನ ಪಿ.ಎ. ಮಂಜುನಾಥ್, ಯೋಗಿಶ್ ನಾಯ್ಡು, ಡಿ.ಎಸ್.ಎಸ್.ನ ವಿ.ಆರ್. ರಜನಿಕಾಂತ್ ಮತ್ತಿತ್ತರರು ಪಾಲ್ಗೊಂಡಿದ್ದರು.