ಮಡಿಕೇರಿ, ಅ. 8: ಜಿಲ್ಲೆಯಲ್ಲಿ ಹೊಸದಾಗಿ 95 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 3458 ಪ್ರಕರಣಗಳು ವರದಿಯಾಗಿದ್ದು, 2775 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 50 ಮಂದಿ ಸಾವನ್ನಪ್ಪಿದ್ದು 633 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ 91 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 89 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ, 453 ಮಂದಿ ಹೋಮ್ ಐಸೋಲೇಷನ್‍ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆ ಯಾದ್ಯಂತ 564 ನಿಯಂತ್ರಿತ ವಲಯಗಳಿವೆ.