ಸೋಮವಾರಪೇಟೆ, ಅ. 7: ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಶಿಕ್ಷಕರ ದಿನಾಚರಣಾ ಸಮಿತಿ ವತಿಯಿಂದ ಸ್ಥಳೀಯ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಸಕ್ತ ವರ್ಷ ನಿವೃತ್ತರಾದ ತಾಲೂಕಿನ ಶಿಕ್ಷಕರುಗಳನ್ನು ಸನ್ಮಾನಿಸಲಾಯಿತು.
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರುಗಳಾದ ಎಸ್.ವಿ. ವಿಶ್ವನಾಥ, ರಾಮಚಂದ್ರಮೂರ್ತಿ, ಹೆಚ್.ಕೆ. ಸುಂದರ, ಹೆಚ್.ಎಸ್. ರಾಜಮುಡಿ, ಜೂಲಿಯಾನ ಲೋಬೊ, ಬಿ.ಎಸ್. ಶಾರದ, ವಿ.ಆರ್. ರುಕ್ಮಿಣಿ, ಎ. ಆಲಿಸಮ್ಮ, ಹೆಚ್.ವಿ. ಜಯಮ್ಮ, ಕೆ.ಎಂ. ಪಾರ್ವತಿ, ಜಯರಾಮ್, ಟಿ.ಕೆ. ಮೀನಾಕ್ಷಿ, ಎನ್.ಎನ್. ಶಿವಣ್ಣ, ಕೆ. ಹರಿಣಾಕ್ಷಿ, ಜಾನಕಿ, ಕೆ.ಬಿ. ಪ್ರಕಾಶ್, ಹೆಚ್.ಎಲ್. ಪದ್ಮಾವತಿ ಅವರುಗಳನ್ನು ಸನ್ಮಾನಿಸಲಾಯಿತು.
ಪ್ರೌಢಶಾಲಾ ಶಿಕ್ಷಕರ ವಿಭಾಗದಲ್ಲಿ ಪಿ.ಸಿ. ಲೀಲಾವತಿ, ಬಿ.ಟಿ. ರತ್ನಾವತಿ, ಹೆಚ್.ಎಂ. ರುದ್ರೇಶ್, ಎಂ.ಟಿ. ಪರಮೇಶ್ವರಪ್ಪ, ಕೆ.ಆರ್. ಮಾರ್ಗರೇಟ್, ಎಂ. ರಂಗಸ್ವಾಮಿ, ಕೆ.ಎಸ್. ಜಾನಕಮ್ಮ, ಎನ್.ಎಸ್. ಪದ್ಮನಾಭ, ಬಿ.ಜಿ. ರವಿ, ಬೋಧಕೇತರ ಸಿಬ್ಬಂದಿಗಳಾದ ದಾಸ, ಕೆ.ಎಂ. ಪಾರ್ವತಮ್ಮ, ತಿಪ್ಪೇಸ್ವಾಮಿ ಅವರುಗಳನ್ನು ಅಭಿನಂದಿಸಲಾಯಿತು.
ಕರ್ತವ್ಯದಲ್ಲಿದ್ದ ಸಂದರ್ಭ ಮರಣ ಹೊಂದಿದ ಶಿಕ್ಷಕರುಗಳಾದ ನಾಗವೇಣಿ, ಡೀನಾ ರೋಡ್ರಿಗಸ್, ಹೇಮಲತಾ ಅವರುಗಳ ಕುಟುಂಬ ಸದಸ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ಸರೋಜಮ್ಮ, ಕೆ.ಪಿ. ಚಂದ್ರಕಲಾ, ತಾ.ಪಂ. ಸದಸ್ಯೆ ತಂಗಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್, ಜಿಲ್ಲಾಧ್ಯಕ್ಷ ಚೇತನ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಕುಂತಿ ಬೋಪಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.