ಕೂಡಿಗೆ, ಅ. 7: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು-ಕಣಿವೆ ರಸ್ತೆ ತೀರಾ ಹಾಳಾಗಿದ್ದು, ಈ ರಸ್ತೆಯಲ್ಲಿ ಭಾರೀ ಗುಂಡಿಗಳು ಬಿದ್ದಿರುವುದರಿಂದ ದುರಸ್ತಿಗೆ ಈ ವ್ಯಾಪ್ತಿಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ರಸ್ತೆಯು ಹಾಸನ ಹೆದ್ದಾರಿಗೆ ಹೊಂದಿಕೊಂಡಂತೆ ಇರುವುದರಿಂದ ಸೋಮವಾರಪೇಟೆ ಕೇಂದ್ರ ಸ್ಥಾನಕ್ಕೆ ಹೋಗಲು ಬಹಳ ಹತ್ತಿರದ ದಾರಿಯಾಗಿದೆ. ಅಲ್ಲದೆ ಕುಶಾಲನಗರ ಹೋಬಳಿ ಕೇಂದ್ರಕ್ಕೆ ಗ್ರಾಮಸ್ಥರು ತೆರಳಲು ಅನುಕೂಲವಾಗುತ್ತದೆ. ಈ ಮಾರ್ಗದಲ್ಲಿ ಕಲ್ಲುಕೋರೆಯ ಲಾರಿಗಳು ಸಂಚರಿಸುವುದರಿಂದ ರಸ್ತೆ ತೀರಾ ಹಾಳಾಗಿದೆ. ಇಲಾಖೆಯವರು ತುರ್ತಾಗಿ ದುರಸ್ತಿಗೆ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.