ಸೋಮವಾರಪೇಟೆ ಬಿಜೆಪಿ ಘಟಕ: ಸೋಮವಾರಪೇಟೆ ತಾಲೂಕು ಬಿಜೆಪಿ ಘಟಕದ ಆಶ್ರಯದಲ್ಲಿ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಹಾಗೂ ಆತ್ಮನಿರ್ಭರ ಸೇವಾ ಸಪ್ತಾಹದ ಅಂಗವಾಗಿ ಸನ್ಮಾನ ಕಾರ್ಯಕ್ರಮ ನಡೆಯಿತು.

ಕುಶಾಲನಗರದ ಕಾರು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಮತ್ತು ಗಣ್ಯರು ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.

ನಂತರ ಮಾತನಾಡಿದ ಶಾಸಕರು, ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತ್ಯಾಗ ಮತ್ತು ಕೊಡುಗೆಗಳ ಬಗ್ಗೆ ಮಾಹಿತಿ ನೀಡಿದರು. ಕೊಡಗು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಮನುಕುಮಾರ್ ರೈ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸ್ವಾವಲಂಬಿ ಜೀವನ ನಡೆಸುತ್ತಿರುವ ಪಟ್ಟಣದ ನಾಲ್ವರು ಸಣ್ಣ ಉದ್ಯಮಿಗಳಾದ ಕಮಲ, ಗಿರೀಶ್, ಕಮಲ್ ರಾಜ್ ಥಾಪ, ನಟರಾಜ್ ಅವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾದಪ್ಪ, ಕಾರ್ಯದರ್ಶಿ ರೂಪ ಸತೀಶ್, ಸೋಮವಾರಪೇಟೆ ತಾಲೂಕು ಮಾಜಿ ಅಧ್ಯಕ್ಷ ಎಂ.ಎನ್. ಕುಮಾರಪ್ಪ, ಕುಡಾ ಅಧ್ಯಕ್ಷ ಎಂ.ಎಂ. ಚರಣ್, ತಾಲೂಕು ವಕ್ತಾರ ಕೆ.ಜಿ. ಮನು, ನಗರ ಬಿಜೆಪಿ ಅಧ್ಯಕ್ಷ ವಿ.ಎನ್. ಉಮಾಶಂಕರ್, ಪ.ಪಂ. ಸದಸ್ಯರಾದ ಬಿ. ಅಮೃತ್‍ರಾಜ್, ರೂಪಾ ಉಮಾಶಂಕರ್, ಕುಡಾ ಸದಸ್ಯರಾದ ವೈಶಾಖ್, ವಿ.ಡಿ. ಪುಂಡರೀಕಾಕ್ಷ ಮತ್ತಿತರರು ಇದ್ದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿ: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ಅನಂತಕುಮಾರ್, ನಗರ ಸಮಿತಿ ಅಧ್ಯಕ್ಷ ಶರೀಫ್ ಇಬ್ರಾಹಿಂ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪ್ರಮುಖರು, ಕಾರ್ಯಕರ್ತರು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮಿಸಿದರು.

ಈ ಸಂದರ್ಭ ಮಾತನಾಡಿದ ಇಂಟೆಕ್ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಪ್ರತಿಯೊಬ್ಬ ಕಾಂಗ್ರೆಸಿಗರು ಕೂಡ ಗಾಂಧೀಜಿಯ ಜೀವನ ಚರಿತ್ರೆ ಮತ್ತು ಸಾಹಿತ್ಯವನ್ನು ಅಭ್ಯಸಿಸಬೇಕಿದೆ. ಮಹಾತ್ಮರ ಜಯಂತಿಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೆ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ಅನಂತಕುಮಾರ್, ಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ರೈ ಪಾಂಬಾರು ಮಾತನಾಡಿ ದಿನದ ಮಹತ್ವದ ಕುರಿತು ಮಾತನಾಡಿದರು.

ರಾಜ್ಯ ಕಾರ್ಮಿಕ ಘಟಕದ ಕಾರ್ಯದರ್ಶಿ ಅಜ್ಜಳ್ಳಿ ರವಿ, ಜಿಲ್ಲಾ ಪ್ರಮುಖರಾದ ಜನಾರ್ಧನ್, ಗೋವಿಂದರಾಜ್‍ದಾಸ್, ತ್ರಿನೇಶ್ ಸೇರಿದಂತೆ ವಾರ್ಡ್ ಅಧ್ಯಕ್ಷರುಗಳು, ಕಾರ್ಯಕರ್ತರು ಇದ್ದರು.

ಪೆರಾಜೆ: ಯುವ ಕೋಟೆ ಯುವಕ ಮಂಡಲ ಪುತ್ಯ ಪೆರಾಜೆ ಇದರ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಕೋಟೆ ಶಾಲಾ ವಠಾರದಲ್ಲಿ ಮತ್ತು ಸ್ಥಳೀಯ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲ್ ಕಸಗಳನ್ನು ಸಂಗ್ರಹಿಸುವ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯದಲ್ಲಿ ಯುವಕೋಟೆ ಯುವಕ ಮಂಡಲದ ಅಧ್ಯಕ್ಷ ಲಿಖಿನ್ ಅಡ್ಕದ, ಗೌರವ ಅಧ್ಯಕ್ಷ ಶುಭಾಶ್ ಬಂಗಾರಕೋಡಿ, ಗೌರವ ಸಲಹೆಗಾರ ಚಿನ್ನಪ್ಪ ಅಡ್ಕದ, ಉಪಾಧ್ಯಕ್ಷ ಮೋನಿಶ್ ವ್ಯಾಪಾರೆ, ಸಹ ಕಾರ್ಯದರ್ಶಿ ಚರಣ್ ರಾಜ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

ಬಾಳೆಲೆ ಪಿಯು ಕಾಲೇಜು: ದೇಶದ ಜನತೆಯನ್ನು ಒಗ್ಗೂಡಿಸಿ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿಯವರ ಅಂತ್ಯ ದುರಂತಮಯವಾದದ್ದು ವಿಷಾದಕರ ಎಂದು ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಹೇಳಿದರು.

ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದ ಉದ್ದಗಲಕ್ಕೂ ಸಂಚರಿಸಿ ಜನತೆಯನ್ನು ಒಗ್ಗೂಡಿಸಿ ಶಾಂತಿ, ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ಪಡೆದುಕೊಳ್ಳಲು ಕಾರಣಕರ್ತರಾದರು. ಅಂತಹ ಮಹಾತ್ಮನ ಜಯಂತಿ ಕೇವಲ ಒಂದು ದಿನ ಆಚರಿಸಿ ಬಿಟ್ಟರೆ ಸಾಲದು. ಅವರ ತತ್ವ ಮತ್ತು ಆದರ್ಶಗಳನ್ನು ತಾವೂ ಅಳವಡಿಸಿಕೊಂಡು ಯುವಜನತೆಗೆ ಮುಟ್ಟಿಸಬೇಕಾದ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಮಾತನಾಡಿ, ಉಪದೇಶ ನೀಡುವ ಕಾಲಘಟ್ಟದಲ್ಲಿ ನಾವಿಲ್ಲ. ಇವತ್ತು ಏನಿದ್ದರೆ ವಾಸ್ತವಿಕ ನೆಲೆಗಟ್ಟಿನಲ್ಲಿ ಕೆಲಸ ಆಗಬೇಕಾಗಿದೆ. ಮಹಾತ್ಮ ಗಾಂಧೀಜಿಯವರ ತತ್ವ ಮತ್ತು ಆದರ್ಶಗಳು ಕೇವಲ ಉಪದೇಶದಲ್ಲಿ ನಿಲ್ಲಬಾರದು. ಅವು ಜೀವನದಲ್ಲಿ ಅಳವಡಿಕೆಯಾಗಬೇಕು ಎಂದರು.

ಪ್ರಾಂಶುಪಾಲ ಡಾ. ಜೆ. ಸೋಮಣ್ಣ, ಆಡಳಿತ ಮಂಡಳಿ ಉಪಾಧ್ಯಕ್ಷ ಕಾಯಮಾಡ ರಾಜ, ಕಾಡ್ಯಮಾಡ ಉದಯ ಉತ್ತಪ್ಪ, ಕೋಶಾಧಿಕಾರಿ ಅಡ್ಡೇಂಗಡ ದೇವಯ್ಯ, ಸಹಕಾರ್ಯದರ್ಶಿ ಪೋಡಮಾಡ ಮೋಹನ್, ನಿರ್ದೇಶಕ ಮೇಚಂಡ ಪೆಮ್ಮಯ್ಯ, ಮುಖ್ಯ ಶಿಕ್ಷಕ ಚಂದ್ರಶೇಖರ್, ಶಿಕ್ಷಕರಾದ ಎಂ.ಪಿ. ರಾಘವೇಂದ್ರ, ಪಿ.ಎ. ಪ್ರಭುಕುಮಾರ್, ಸುಬ್ಬಯ್ಯ, ಜಯಣ್ಣ ಹಾಜರಿದ್ದರು.ನಿಡ್ತ ಬಸಪ್ಪ ಸಭಾಂಗಣ: ವಿಶ್ವಕಂಡ ಅತ್ಯಂತ ಶ್ರೇಷ್ಠ ನಾಯಕರುಗಳಲ್ಲಿ ಮಹಾತ್ಮ ಗಾಂಧೀಜಿ ಅವರು ಅಗ್ರಗಣ್ಯ ಸ್ಥಾನ ಪಡೆದಿರುವುದು ಭಾರತದ ಹೆಮ್ಮೆ ಎಂದು ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಕೆ.ಪಿ. ಜಯಕುಮಾರ್ ಅಭಿಪ್ರಾಯ ಪಟ್ಟರು.

ಮೈಸೂರಿನ ಲೇಖಕ ಮತ್ತು ಮೂದ್ರವಳ್ಳಿ ಭೈರಾಚಾರ್ಯ-ದೇವಮ್ಮ ಸ್ಮಾರಕ ದತ್ತಿ ಸ್ಥಾಪಕ ಬಿ.ಬಿ. ಶಿವಣ್ಣ ಶೀತಲ್ ಹಾಗೂ ಶನಿವಾರಸಂತೆ ಲಯನ್ಸ್ ಕ್ಲಬ್, ಭಾರತಿ ವಿದ್ಯಾಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಿಡ್ತ ಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 151ನೇ ಗಾಂಧಿ ಜಯಂತಿ ಆಚರಣೆ ಮತ್ತು ದಿನದ ಅಂಗವಾಗಿ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಹತ್ತನೆ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ದಿನದ ಮಹತ್ವದ ಕುರಿತು ಮಾತನಾಡಿದ ಜಯಕುಮಾರ್, ಅಹಿಂಸ ತತ್ವ-ಆದರ್ಶದಡಿಯಲ್ಲಿ ಭಾರತ ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಮಹಾತ್ಮ ಗಾಂಧೀಜಿ ಅವರು ಇಡೀ ವಿಶ್ವದಲ್ಲೇ ಅಹಿಂಸ ತತ್ವ ಸಿದ್ದಾಂತದ ಮೂಲಕ ಅಗ್ರಗಣ್ಯ ಸ್ಥಾನವನ್ನು ಪಡೆದಿರುವ ವಿಶ್ವ ನಾಯಕರಾಗಿದ್ದಾರೆ ಎಂದರು.

ಶನಿವಾರಸಂತೆ ಪ್ರೆಸ್ ಕ್ಲಬ್ ಅಧ್ಯಕ್ಷ ಹೆಚ್.ಆರ್. ಹರೀಶ್‍ಕುಮಾರ್ ಪ್ರಸ್ತುತ ವಿದ್ಯಾಮಾನಗಳ ಕುರಿತು ಮಾತನಾಡಿ, ಪ್ರಸ್ತುತ ರಾಷ್ಟ್ರ ಹಾಗೂ ಸಮಾಜದಲ್ಲಿ ಜಟಿಲ ವಿದ್ಯಾಮಾನಗಳಲ್ಲಿ ರಾಜಕಿಯ ವ್ಯವಸ್ಥೆ, ಯುವ ಜನಾಂಗ, ವಿದ್ಯಾರ್ಥಿ ಸಮೂಹ ಬದಲಾವಣೆಯಾಗುವ ಅಗತ್ಯ ಕಂಡು ಬರುತ್ತಿದೆ ಎಂದರು. ಲಯನ್ಸ್ ಕ್ಲಬ್ ಖಜಾಂಚಿ ಬಿ.ಕೆ. ಚಿಣ್ಣಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಬಿ. ನಾಗಪ್ಪ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮ ಆಯೋಜಕ ಸ್ಮಾರಕ ದತ್ತಿನಿಧಿ ಸ್ಥಾಪಕ ಬಿ.ಬಿ. ಶಿವಣ್ಣ ಶೀತಲ್ ಪ್ರಸ್ತಾವಿಕವಾಗಿ ಮಾತನಾಡಿದರು. ಗಾಂಧಿ ಜಯಂತಿ ಅಂಗವಾಗಿ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ನಿವೃತ್ತ ಸೈನಿಕರು, ಕೃಷಿ ಸಾಧಕರು, ಹಿರಿಯರು, ವಿವಿಧ ಕ್ಷೇತ್ರದ ಸಾಧಕರು ಮತ್ತು ಹೋಬಳಿ ವ್ಯಾಪ್ತಿಯಲ್ಲಿ ಹತ್ತನೆ ತರಗತಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಕಾಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಉಪಸ್ಥಿತರಿದ್ದ ಗಣ್ಯರನ್ನು ಗೌರವಿಸಲಾಯಿತು.

ಗೋಣಿಕೊಪ್ಪಲು: ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ತಾಲೂಕು ಬಿಜೆಪಿ ವತಿಯಿಂದ ಆಯೋಜನೆಗೊಂಡಿದ್ದ ಮಹಾತ್ಮ ಗಾಂಧಿ ಜನ್ಮ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಜೆ.ಪಿ. ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್, ಗಾಂಧೀಜಿಯವರ ಜನ್ಮ ದಿನಾಚರಣೆ ಅಂಗವಾಗಿ ನಮ್ಮ ಮುಂದಿರುವ ಸ್ವಾವಲಂಬಿಗಳನ್ನು ಗೌರವಿಸಿ ಸನ್ಮಾನಿಸುವುದರ ಮೂಲಕ ಮತ್ತೊಬ್ಬರಿಗೆ ಮಾದರಿಯಾಗುವ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಸ್ವಾವಲಂಭಿ ಬದುಕನ್ನು ಕಂಡುಕೊಂಡಿರುವ ಸಾಧಕರಾದ ಕುಲ್ಲಚಂಡ ಶೈಲ ಸುಬ್ಬಯ್ಯ, ಕರ್ಮಚಾರಿ ವೃತ್ತಿ ನಡೆಸುತ್ತಿರುವ ಮೋಹನ್ ಹಾಗೂ ಬಸ್ ನಿಲ್ದಾಣದಲ್ಲಿ ಕೆಲಸ ನಿರ್ವಹಿಸುತ್ತಿರುವ ರಾಜ (ಲಾಲಿಬಿಲಿ) ಇವರನ್ನು ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ, ಕೇಂದ್ರ ಸರ್ಕಾರವು ಸ್ವಾವಲಂಭಿ ಬದುಕು ಸಾಗಿಸಲು ಬ್ಯಾಂಕ್‍ಗಳಲ್ಲಿ ಮುದ್ರ ಯೋಜನೆಯ ಮೂಲಕ ಕೈಗೆಟುಕುವ ರೀತಿಯಲ್ಲಿ ಸಾಲವನ್ನು ನೀಡುವ ಮೂಲಕ ಇವರ ಬದುಕನ್ನು ಹಸನು ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷ ಅಚ್ಚಪಂಡ ಮಹೇಶ್, ಜಿಲ್ಲಾ ಕಾರ್ಯದರ್ಶಿ ಗುಮ್ಮಟ್ಟೀರ ಕಿಲನ್ ಗಣಪತಿ, ಪ್ರಭು ಪೂಣಚ್ಚ, ಖಜಾಂಚಿ ಚೆಪ್ಪುಡೀರ ಮಾಚು, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರವೀಣ್, ಬೋಪಣ್ಣ, ಉಪಾಧ್ಯಕ್ಷರಾದ ಚೋಡುಮಾಡ ಶ್ಯಾಂ ಪೂಣಚ್ಚ ಹಾಗೂ ಇತರರು ಇದ್ದರು.

ನಾಪೋಕ್ಲು ಪೊಲೀಸ್ ಠಾಣೆ: ನಾಪೋಕ್ಲು ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಆರ್. ಕಿರಣ್ ನೇತೃತ್ವದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 151ನೇ ಜನ್ಮ ದಿನದ ಅಂಗವಾಗಿ ಠಾಣೆಯ ಆವರಣದಲ್ಲಿ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲಾಯಿತು.

ನರಿಯಂದಡ: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚೇಲಾವಾರ ಗ್ರಾಮದಲ್ಲಿ ನರಿಯಂದಡ ಬಿಜೆಪಿ ಶಕ್ತಿ ಕೇಂದ್ರದ ಮೋರ್ಚಾದ ವತಿಯಿಂದ ಗಾಂಧಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭ ನರಿಯಂದಡ ಶಕ್ತಿ ಕೇಂದ್ರದ ಉಪಾಧ್ಯಕ್ಷ ಬಾಚಮಂಡ ಲೋಕೇಶ್, ಬೂತ್ ಸಮಿತಿಯ ಅಧ್ಯಕ್ಷ ಕುಟ್ಟನ ರಾಧಾಕೃಷ್ಣ, ಗ್ರಾಮಾಂತರ ಮಟ್ಟದ ಯುವ ಮೋರ್ಚಾದ ಅಧ್ಯಕ್ಷ ಕುಟ್ಟನ ಶಶಿಕುಮಾರ್, ಕಾರ್ಯದರ್ಶಿ ಕೊಳಿಮಾಡು ಬಿಪಿನ್ ಹಾಗೂ ಸದಸ್ಯರಾದ ಕುಟ್ಟನ ಸುನಿಲ್ ಹಾಗೂ ಯುವ ಕಾರ್ಯಕರ್ತರು ಹಾಜರಿದ್ದರು. ಸಭೆಯ ನಂತರ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛ ಭಾರತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ: ಇಂದಿನ ಯುವ ಸಮುದಾಯ ಗಾಂಧೀಜಿ ಅವರ ಆದರ್ಶ ಪಾಲಿಸಬೇಕು. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಸತ್ಯ, ಅಹಿಂಸೆ, ಶಾಂತಿ, ಶಿಸ್ತು ಮುಂತಾದ ಸದ್ಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ಮಾರ್ಗದಲ್ಲಿ ನಡೆಯುವ ಮೂಲಕ ಮಹಾತ್ಮ ಗಾಂಧೀಜಿಯವರ ಕನಸನ್ನು ನನಸು ಮಾಡಿ ಎಂದು ಕೂಡಿಗೆ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕ ಪೆÇ್ರ. ಕೆ.ಎಸ್. ಚಂದ್ರಶೇಖರಯ್ಯ ಅವರು ಕರೆ ನೀಡಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 151ನೇ ಜಯಂತ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯ ಮತ್ತು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗಾಂಧೀಜಿಯವರಂತೆ ಪ್ರಾಮಾಣಿಕತೆ ಹಾಗೂ ಶಿಸ್ತನ್ನು ಬೆಳೆಸಿಕೊಂಡು ಭಾರತದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದರು.

ಈ ಸಂದರ್ಭ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಜೊತೆಗೆ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಿ.ಎಸ್. ಶ್ರೀನಾಥ್, ವಿವಿಧ ವಿಭಾಗದ ಉಪನ್ಯಾಸಕ ವರ್ಗ, ಬೋಧಕೇತರ ವರ್ಗ, ತಾಂತ್ರಿಕ ವೃಂದ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವೀರಾಜಪೇಟೆ: ವೀರಾಜಪೇಟೆಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲೆ ತಾತಂಡ ಜ್ಯೋತಿ ಪ್ರಕಾಶ್ ಅವರು ಮಹನೀಯರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭ ಕಾಲೇಜಿನ ಉಪನ್ಯಾಸಕ ವೃಂದದವರು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಗಾಂಧಿ ಜಯಂತಿ ಪ್ರಯುಕ್ತ ಕಾಲೇಜಿನ ಆವರಣವನ್ನು ಸ್ವಚ್ಛಗೊಳಿಸುವುದರ ಮೂಲಕ ಶ್ರಮದಾನ ಮಾಡಲಾಯಿತು.

ಎ.ಪಿ.ಜೆ. ಬಡಾವಣೆ: ನೆಲ್ಲಿಹುದಿಕೇರಿಯ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಶಾಲಾ ರಸ್ತೆಯಲ್ಲಿರುವ ಎ.ಪಿ.ಜೆ. ಬಡಾವಣೆಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛ ಭಾರತ ಅಭಿಯಾನದ ಮೂಲಕ ಸ್ವಚ್ಛತೆ ಹಾಗೂ ಶ್ರಮದಾನ ಮಾಡಲಾಯಿತು. ಪ್ಲಾಸ್ಟಿಕ್ ನಿಷೇಧದ ಕುರಿತು ನಿವಾಸಿಗಳಿಗೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಮಣಿ ಮೊಹಮ್ಮದ್, ಶಶಿ, ಎಂ.ಎ. ಅಜೀಜ್, ಜಮಾಲ್, ದಿಲೀಪ್ ಇನ್ನಿತರರು ಹಾಜರಿದ್ದರು.

ಹೆಬ್ಬಾಲೆ ಪ್ರಾಥಮಿಕ ಶಾಲೆ: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧೀಜಿಯವರ 151ನೇ ಜನ್ಮ ದಿನ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹುಟ್ಟುಹಬ್ಬವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಅಡ ಹಳೆಕೋಟೆ ಶಾಲೆಯ ಶಿಕ್ಷಕ ಟಿ.ಆರ್. ರಮೇಶ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಗಿರೀಶ್ ಶಿರಂಗಾಲ, ಶಾಲೆಯ ಶಿಕ್ಷಕ ಗೋವಿಂದ ತೊರೆನೂರು, ಶಾಲೆಯ ಮುಖ್ಯ ಶಿಕ್ಷಕಿ ಕಾಮಾಕ್ಷಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಾರಂಭದಲ್ಲಿ ಶಾಲೆ ಮುಖ್ಯ ಶಿಕ್ಷಕ ವೆಂಕಟೇಶ್ ಸ್ವಾಗತಿಸಿದರು. ತೊರೆನೂರು ಶಾಲೆಯ ಮುಖ್ಯ ಶಿಕ್ಷಕಿ ಕಾಮಾಕ್ಷಿ ಅವರು ದಿನದ ಮಹತ್ವವನ್ನು ಕುರಿತು ತಿಳಿಸಿದರು

ಸಮಾರಂಭದಲ್ಲಿ ಶಾಲೆಯ ಹಿರಿಯ ಶಿಕ್ಷಕ ರಮೇಶ್ ಮತ್ತು ಸಹ ಶಿಕ್ಷಕಿಯರಾದ ಪುಷ್ಪವತಿ, ಬಬಿತಾ ಹಾಗೂ ಸಿಬ್ಬಂದಿ ಜಮುನಾ ಮತ್ತು ಏಳನೇ ತರಗತಿಯ ಮಕ್ಕಳು ಭಾಗವಹಿಸಿದ್ದರು.ಗೋಣಿಕೊಪ್ಪಲು ಬಿಜೆಪಿ ಶಕ್ತಿ ಕೇಂದ್ರ: ಮಹಾತ್ಮ ಗಾಂಧೀಜಿಯ ಜನ್ಮ ದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜನ್ಮ ದಿನಾಚರಣೆಯನ್ನು ಗೋಣಿಕೊಪ್ಪಲುವಿನ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾದ ಸುರೇಶ್ ರೈ ಹಾಗೂ ನೂರೆರ ರಂಜಿ ಮುಂದಾಳತ್ವದಲ್ಲಿ ಜರುಗಿತು.

ನಗರದ ಬಸ್ ನಿಲ್ದಾಣ ಸಮೀಪವಿರುವ ಭಗವಧ್ವಜದ ಆವರಣದಲ್ಲಿ ಸಮಾಗಮಗೊಂಡ ಬಿಜೆಪಿಯ ಪ್ರಮುಖರು, ಸಂಘ ಪರಿವಾರದ ಪ್ರಮುಖರು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಭಾವಚಿತ್ರಕ್ಕೆ ಸಂಘ ಪರಿವಾರದ ಹಿರಿಯರಾದ ಕಾದೀರ ಪೊನ್ನಪ್ಪ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಪಕ್ಷದ ಮುಖಂಡರು,ಕಾರ್ಯಕರ್ತರು ಮಹಾಚೇತನರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಒಬಿಸಿ ಮೋರ್ಚಾದ ಉಪಾಧ್ಯಕ್ಷ ಸುಬ್ರಮಣಿ, ಈ ದೇಶ ಕಂಡ ಮಹಾಚೇತನರಲ್ಲಿ ಗಾಂಧೀಜಿಯು ಮೊದಲ ಸಾಲಿನಲ್ಲಿದ್ದಾರೆ. ಇವರ ಮಾರ್ಗದರ್ಶನವನ್ನು ನಾವೆಲ್ಲರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಒಬಿಸಿ ಮೋರ್ಚಾದ ತಾಲೂಕು ಅಧ್ಯಕ್ಷ ಕೆ. ರಾಜೇಶ್, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ನೂರೆರ ರತಿ ಅಚ್ಚಪ್ಪ, ಸಹ ಕಾರ್ಯದರ್ಶಿ ಸುಳ್ಳಿಮಾಡ ಶಿಲ್ಪ, ಮಂಡಲ ಪ್ರಮುಖ ಕುಲ್ಲಚಂಡ ಚಿಣ್ಣಪ್ಪ, ಪಕ್ಷದ ಪ್ರಮುಖರಾದ ಮಲ್ಚೀರ ಗಾಂಧಿ ದೇವಯ್ಯ, ಗೀತಾ, ಜ್ಯೋತಿ, ಮಣಿಯಮ್ಮ, ಧನಲಕ್ಷ್ಮಿ, ಮಂಜು ಮುಂತಾದವರು ಭಾಗವಹಿಸಿದ್ದರು.

ನಾಪೋಕ್ಲು ಭಗವತಿ ದೇವಾಲಯ: ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಹಳೆ ತಾಲೂಕು ಭಗವತಿ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಆಂದೋಲನವನ್ನು ಆಯೋಜಿಸಲಾಗಿತ್ತು. ದೇವಾಲಯದ ಸುತ್ತಮುತ್ತಲಿನ ಕಾಡು ಕಡಿದು ಸ್ವಚ್ಛಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಶಕ್ತಿ ಕೇಂದ್ರದ ಸಂಚಾಲಕ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಸಹ ಸಂಚಾಲಕ ಕೇಲೇಟಿರ ದೀಪು ದೇವಯ್ಯ, ರೈತ ಮೋರ್ಚಾ ತಾಲೂಕು ಅಧ್ಯಕ್ಷ ಶಿವಚಾಳಿಯಂಡ ಜಗದೀಶ್, ತಾಲೂಕು ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್, ಶಿವಚಾಳಿಯಂಡ ಕಿಶೋರ್ ಬೋಪಣ್ಣ, ದೀಪು, ಅರೆಯಡ ಅಶೋಕ್, ಗಣೇಶ್, ಕುಲ್ಲೇಟಿರ ಶಂಕರಿ, ಕಂಗಾಂಡ ಜಾಲಿ ಪೂವಪ್ಪ ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

ಗೋಣಿಕೊಪ್ಪ ಕಾವೇರಿ ಕಾಲೇಜು: ಇಲ್ಲಿನ ಕಾವೇರಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ನಂತರ ಬಸ್ ತಂಗುದಾಣದ ಸುತ್ತ ಶ್ರಮದಾನ ಮಾಡಲಾಯಿತು. ಪ್ರಾಂಶುಪಾಲ ಪೆÇ್ರ. ಕೆ.ವಿ. ಕುಸುಮಾಧರ್, ಎನ್.ಎಸ್.ಎಸ್ ಅಧಿಕಾರಿ ವನಿತ್‍ಕುಮಾರ್, ನಾಯಕರಾದ ಸುಭಾಷ್ ಮತ್ತು ದೀಪಿಕಾ, ಸಿಬ್ಬಂದಿ ಡಿಕ್ಕಿ, ಅಯ್ಯಪ್ಪ ಇದ್ದರು.

ಬಸವತ್ತೂರು: ಕೂಡಮಂಗಳೂರು ಪಂಚಾಯಿತಿಯ ಬಸವನತ್ತೂರು ಬೂತ್ ಸಮಿತಿ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಶ್ರಮದಾನ ನಡೆಸಲಾಯಿತು. ಸೋಮವಾರಪೇಟೆ ಮಂಡಲ ಉಪಾಧ್ಯಕ್ಷ ಕೆ. ವರದ, ಮಾಜಿ ಪಂಚಾಯಿತಿ ಅಧ್ಯಕ್ಷ ವಾಂಚೀರ ಮನು ನಂಜುಂಡ ಹಾಗೂ ಮಾಜಿ ಆರ್.ಎಂ.ಸಿ. ಅಧ್ಯಕ್ಷ ಎಂ.ಬಿ. ಜಯಂತ, ಬೂತ್ ಅಧ್ಯಕ್ಷ ಆರ್. ಕೃಷ್ಣ, ಪ್ರಧಾನ ಕಾರ್ಯದರ್ಶಿ ಪ್ರವೀಣ ಹಾಗೂ ಇತರರು ಇದ್ದರು.