ಸೋಮವಾರಪೇಟೆ, ಅ. 7: ಸಮೀಪದ ಗೌಡಳ್ಳಿ ಪ್ರಾಥಮಿಕ ಶಾಲೆ, ಕೃಷಿ ಪತ್ತಿನ ಸಹಕಾರ ಸಂಘ, ಗೌಡಳ್ಳಿ ಪ್ರೌಢಶಾಲೆಯ ಸ್ಥಾಪಕ ಅಧ್ಯಕ್ಷರು ಹಾಗೂ ದಾನಿಗಳಾಗಿದ್ದ ದಿ.ವಿ.ಟಿ. ವೀರಪ್ಪ ಅವರ 105ನೇ ಜನ್ಮದಿನಾಚರಣೆಯನ್ನು ಗೌಡಳ್ಳಿ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು. ಮೊಮ್ಮಗ ವರ್ಷಿತ್ ಅವರು, ವೀರಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್, ವಿವಿಧ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.