ಮಡಿಕೇರಿ, ಅ. 7: ಮಡಿಕೇರಿಯ ಕೊಡವ ವಿದ್ಯಾನಿಧಿ (ಕೂರ್ಗ್ ಎಜುಕೇಷನ್ ಫಂಡ್) ವತಿಯಿಂದ ತಾ. 10 ರಂದು ಮಡಿಕೇರಿ ಕೊಡವ ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಸಕ್ತ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮುಂದೂಡ ಲಾಗಿದೆ. ಕೋವಿಡ್ ಕಾರಣದಿಂದಾಗಿ ನಿಗದಿತ ಕಾರ್ಯಕ್ರಮ ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ತಿಳಿಸುವದಾಗಿ ಕಾರ್ಯದರ್ಶಿ ಮೇದುರ ಕಾವೇರಪ್ಪ ಅವರು ತಿಳಿಸಿದ್ದಾರೆ.