ಪೊನ್ನಂಪೇಟೆ, ಅ. 6: ಕೊಡಗಿನಲ್ಲಿ ನೂತನವಾಗಿ ಘೋಷಿ ಸಲ್ಪಟ್ಟಿರುವ ಪೊನ್ನಂಪೇಟೆ ತಾಲೂಕಿನ ಕಾರ್ಯ ಚಟುವಟಿಕೆಗಳಿಗೆ ಚಾಲನೆ ಸಿಗುವಂತಾಗಲು ತ್ವರಿತವಾಗಿ ನೂತನ ತಹಶೀಲ್ದಾರ್ ಅವರನ್ನು ನೇಮಕ ಮಾಡುವಂತೆ ಆಗ್ರಹಿಸಲಾಗಿದೆ.ಈಗಾಗಲೇ ತಾಲೂಕು ಅಧಿಕೃತವಾಗಿ ಘೋಷಿಸಲ್ಪಟ್ಟಿದ್ದು, ಇದರ ಉದ್ಘಾಟನೆಗಾಗಿ ರೂಪು-ರೇಷೆ ಹಮ್ಮಿಕೊಳ್ಳುವ ಕುರಿತಾಗಿ ನಿನ್ನೆ ಪೊನ್ನಂಪೇಟೆ ಕೊಡವ ಸಮಾಜದ ರಿಕ್ರಿಯೇಷನ್ ಕ್ಲಬ್‍ನ ಸಭಾಂಗಣದಲ್ಲಿ ಸಭೆಯೊಂದನ್ನು ಆಯೋಜಿಸಲಾಗಿತ್ತು. ತಾಲೂಕು (ಮೊದಲ ಪುಟದಿಂದ) ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಮಾಚಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಪ್ರಯತ್ನಿಸಲು ಶಾಸಕ ಕೆ.ಜಿ. ಬೋಪಯ್ಯ ಅವರನ್ನು ವಿನಂತಿಸಲು ತೀರ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಅರುಣ್ ಮಾಚಯ್ಯ ಅವರು ಉದ್ಘಾಟನೆ ದಿನಾಂಕ ನಿಗಧಿಗೂ ಮುನ್ನ ನೂತನ ತಾಲೂಕಿಗೆ ಕೂಡಲೇ ತಹಶೀಲ್ದಾರರನ್ನು ನೇಮಕ ಮಾಡಬೇಕಿದೆ, ಇದರಿಂದ ಆಡಳಿತಾತ್ಮಕ ವ್ಯವಹಾರವು ಶೀಘ್ರವಾಗಿ ನಡೆಯಲಿದ್ದು, ಉದ್ಘಾಟನೆಗೆ ಹಾಗೂ ಪೂರ್ವ ಸಿದ್ಧತೆಗೆ ಅನುಕೂಲವಾಗ ಲಿದೆ ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ನಾಗರಿಕ ವೇದಿಕೆಯ ಕಾನೂನು ಸಲಹೆಗಾರರಾದ ವಕೀಲ ಮತ್ರಂಡ ಪಿ. ಅಪ್ಪಚ್ಚು ಅವರು ಮೂರು ವರ್ಷಗಳ ಹೋರಾಟದಲ್ಲಿ ನೂತನ ತಾಲೂಕು ಪಡೆದಿದ್ದು, ಉದ್ಘಾಟನೆಗಾಗಿ ಈಗಾಗಲೇ ನಾಗರಿಕ ವೇದಿಕೆ ವತಿಯಿಂದ ದಾನಿಗಳು ನೀಡಿದ ಸಹಾಯ ಧನದಲ್ಲಿ ನೂತನ ಕಚೇರಿಗೆ ಬೇಕಾದ ಪೀಠೋಪಕರಣ, ಕಟ್ಟಡ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು ಹಾಗೂ ಮುಂದೆ ಸರಕಾರದಿಂದ ಗ್ರಾ.ಪಂ. ಚುನಾವಣೆ ಘೋಷಣೆಯಾಗಲಿದ್ದು, ಅದಕ್ಕೂ ಮುನ್ನ ಶಾಸಕರನ್ನು ಆಹ್ವಾನಿಸಿ ಉದ್ಘಾಟನಾ ದಿನಾಂಕವನ್ನು ನಿಗದಿಪಡಿಸಬೇಕಿದೆ ಎಂದರು.

ಕೋವಿಡ್ ಪರಿಣಾಮದಿಂದ ಸರಕಾರದ ಕೆಲವು ಕಾರ್ಯಗಳು ವಿಳಂಬವಾಗುತ್ತಿದೆ ಹಾಗೂ ನೂತನ ತಹಶೀಲ್ದಾರರ ನೇಮಕಾತಿಗೆ ಆರ್ಥಿಕ ಇಲಾಖೆ ಹಾಗೂ ಆಡಳಿತಾತ್ಮಕ ಹಾಗೂ ಸಿಬ್ಬಂದಿ ಇಲಾಖಾ ವತಿಯಿಂದ ಆದೇಶ ಪಡೆದ ನಂತರವಷ್ಟೆ ಉದ್ಘಾಟನಾ ದಿನಾಂಕವನ್ನು ನಿಗದಿ ಪಡಿಸಲು ಸಾಧ್ಯ. ಈ ನಿಟ್ಟಿನಲ್ಲಿ ಈಗಾಗಲೇ ಸದರಿ ಇಲಾಖೆಗಳಿಗೆ ಪತ್ರ ವ್ಯವಹಾರ ನಡೆಸಿದ್ದು, ಮುಂದಿನ ದಿನಗಳಲ್ಲಿ ನೂತನ ತಹಶೀಲ್ದಾರರ ನೇಮಕಾತಿಗೆ ಪ್ರಯತ್ನಿಸುವದಾಗಿ ಸಭೆಗೆ ಭರವಸೆ ನೀಡಿದರು.

ನಾಗರಿಕ ವೇದಿಕೆಯ ಅಧ್ಯಕ್ಷ ಪಿ.ಬಿ. ಪೂಣಚ್ಚ ಅವರು ಸ್ವಾಗತಿಸಿದರು. ತಾಲೂಕು ಸಂಚಾಲಕರಾದ ಮಾಚಿಮಾಡ ರವೀಂದ್ರ ಅವರು ಪ್ರಾಸ್ತಾವಿಕವಾಗಿ ಉದ್ಘಾಟನೆ ದಿನಾಂಕ ನಿಗದಿಯ ಬಗ್ಗೆ ಮಾತನಾಡಿದರು. ನಾಗರಿಕ ವೇದಿಕೆಯ ಉಪಾಧ್ಯಕ್ಷರಾದ ಚೆಪ್ಪುಡೀರ ಸೋಮಯ್ಯ ವಂದಿಸಿದರು. ಸಭೆಯಲ್ಲಿ ಮೂಕಳೇರ ಸುಮಿತ, ಅಕ್ರಮ - ಸಕ್ರಮ ಸಮಿತಿಯ ಅಧ್ಯಕ್ಷ ಗಿರೀಶ್ ಗಣಪತಿ, ಅರಣ್ಯ ನಿಗಮದ ಮಾಜಿ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಸೇರಿದಂತೆ ನಾಗರಿಕ ವೇದಿಕೆಯ ಸದಸ್ಯರುಗಳು ಹಾಗೂ ನೂತನ ತಾಲೂಕಿನ ಹಲವು ಗ್ರಾಮಸ್ಥರು ಭಾಗವಹಿಸಿ ಸಭೆಗೆ ಸಲಹೆ ಸೂಚನೆಗಳನ್ನು ನೀಡಿದರು. ಪೊನ್ನಂಪೇಟೆ ಶಕ್ತಿ ಕೇಂದ್ರದ ಪ್ರಮುಖರಾದ ಮೂಕಳೇರ ಮಧು, ಕೊಟೇರ ಕಿಶನ್, ಎಪಿಸಿಯಂಎಸ್ ಅಧ್ಯಕ್ಷ ಮುದ್ದಿಯಡ ಗಣಪತಿ ಮತ್ತಿತರರು ಹಾಜರಿದ್ದರು.