ಚೆಟ್ಟಳ್ಳಿ, ಅ. 6: ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಜನಪರ ವೇದಿಕೆ ವತಿಯಿಂದ ಸಮೀಪದ ಕೂಡಿಗೆ ಶಕ್ತಿ ವೃದ್ಧಾಶ್ರಮದಲ್ಲಿ ವಿಶ್ವ ಹಿರಿಯ ನಾಗರಿಕ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪತ್ರಕರ್ತ ಮೋಹನ್ಕುಮಾರ್, ತಾಲೂಕು ಅಧ್ಯಕ್ಷ ಆದಂ, ಅಂಬೇಡ್ಕರ್ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಜೈಪ್ರಕಾಶ್ ಮಾತನಾಡಿದರು. ಡಾ. ಬಿ.ಆರ್. ಅಂಬೇಡ್ಕರ್ ಜನಪರ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝೈನುಲ್ ಆಬಿದ್ ಕೆ.ಎ., ಮಹಿಳಾ ಜಿಲ್ಲಾಧ್ಯಕ್ಷೆ ಫಾತಿಮಾ, ಪ್ರಮುಖರಾದ ಕುಮಾರ್, ದುರ್ಗೇಶ, ಕಲ್ಪನಾ, ಇರ್ಷಾದ್ ಇದ್ದರು. ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝೈನುಲ್ ಆಬಿದ್ ಕೆ.ಎ. ನಿರೂಪಿಸಿ, ವಂದಿಸಿದರು.