ಚೆಟ್ಟಳ್ಳಿ, ಅ. 6: ಸಂಕಷ್ಟದಲ್ಲಿದ್ದ ಕಡು ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದ ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.

ಮನೆಯಿಲ್ಲದೆ ಸಂಕಷ್ಟದಲ್ಲಿದ್ದ ಚೆನ್ನಯ್ಯನಕೋಟೆ ಗ್ರಾಮದ ಕುಟುಂಬವೊಂದಕ್ಕೆ ಹುಂಡಿ ಜಮಾಅತೆ ಇಸ್ಲಾಮಿ ಹಿಂದ್ ಮಸೀದಿ ಕಮಿಟಿ ಮನೆ ನಿರ್ಮಿಸಿ ಕೀ ಹಸ್ತಾಂತರ ಮಾಡಿದ್ದಾರೆ.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಗ್ರಾಮದ ಪ್ರಮುಖರಾದ ಹಮೀದ್, ಅಂದ್ರು ಹಾಜಿ, ಯೂಸುಫ್, ಅಬ್ದುಲ್ ರಜಾಕ್, ಹೆಚ್‍ಆರ್‍ಎಸ್ ಸಮಾಜ ಸೇವಾ ಸಂಘಟನೆಯ ಮುಜಾಮಿಲ್ ಸೇರಿದಂತೆ ಮತ್ತಿತರರು ಹಾಜರಿದ್ದರು.