ಸಂಪಾಜೆ, ಅ. 6: ಜಿಲ್ಲಾ ಪಂಚಾಯಿತಿ ಕೊಡಗು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಡಿಕೇರಿ ಕೊಡಗು, ಕೊಡಗು ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಮಡಿಕೇರಿ ಕೊಡಗು, ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆ ಕೊಡಗು, ಗ್ರಾಮ ಪಂಚಾಯಿತಿ ಸಂಪಾಜೆ, ಪೆರಾಜೆ, ಚೆಂಬು, ಮದೆನಾಡು, ಪಯಸ್ವಿನಿ ಸಹಕಾರಿ ಸಂಘ ಸಂಪಾಜೆ ಹಾಗೂ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಬಾಲಚಂದ್ರ ಕಳಗಿ ಅಭಿಮಾನಿ ಬಳಗ ಸಂಪಾಜೆ ಕೊಡಗು ಇವರ ಸಂಯುಕ್ತ ಆಶ್ರಯದಲ್ಲಿ ದಿವಂಗತ ಬಾಲಚಂದ್ರ ಕಳಗಿಯವರ ಸ್ಮರಣಾರ್ಥವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ತಾ. 2 ರಂದು ಸಂಪಾಜೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ರಮಾದೇವಿ ಬಾಲಚಂದ್ರ ಕಳಗಿ ಅಧ್ಯಕ್ಷತೆಯಲ್ಲಿ ಕಳಗಿಯವರ ತಂದೆ ವೆಂಕಪ್ಪ ಕಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಸಂಪಾಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಮಾರ್ ಚೆಡ್ಕಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮೋಹನ್, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆಯ ಡಾ. ಕರುಂಬಯ್ಯ, ಪಯಸ್ವಿನಿ ಸಹಕಾರಿ ಸಂಘ ಸಂಪಾಜೆಯ ಅಧ್ಯಕ್ಷ ಎನ್.ಸಿ. ಅನಂತ್, ಪಂಚಲಿಂಗೇಶ್ಚರ ದೇವಸ್ಥಾನ ಸಂಪಾಜೆ ಅಧ್ಯಕ್ಷ ರಾಜಾರಾಮ್, ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆ ವೈದ್ಯ ಡಾ. ಕರಣ್ ರೈ ಉಪಸ್ಥಿತರಿದ್ದರು.

ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಎಸ್. ದೇವಿಪ್ರಸಾದ್, ಬಿ.ಜೆ.ಪಿ. ತಾಲೂಕು ಅಧ್ಯಕ್ಷ ಕಾಂಗಿರ ಸತೀಶ್, ಧನಂಜಯ್ ಅಗೊಳಿಕಜೆ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹೇಮಂತ್ ತೋರೆರ ಹಾಗೂ ಇತರರು ಪಾಲ್ಗೊಂಡಿದ್ದರು.

ಲೀಲಾವತಿ ಕಲಾಯಿ ಪ್ರಾರ್ಥನೆ, ಚಿದಾನಂದ ಹಂಡನ ಸ್ವಾಗತ, ಪುರುಷೋತ್ತಮ ಬಾಳೆಹಿತ್ಲು ಕಾರ್ಯಕ್ರಮ ನಿರೂಪಿಸಿದರು. ರಕ್ತದಾನ ಶಿಬಿರದಲ್ಲಿ 38 ಮಂದಿ ಪಾಲ್ಗೊಂಡರು.

- ಶಬರೀಶ್.