ವೀರಾಜಪೇಟೆ, ಅ. 6: ವೀರಾಜಪೇಟೆಯ ಕಣ್ಣಂಗಾಲ ಪಂಚಾಯಿತಿ ವ್ಯಾಪ್ತಿಯ ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಮಚ್ಚಾರಂಡ ದಮಯಂತಿ ಉತ್ತಪ್ಪ, ಕಾರ್ಯದರ್ಶಿಯಾಗಿ ರೇಖಾ ಸುಂದರ ಆಯ್ಕೆಯಾಗಿದ್ದಾರೆ.
ಅಮ್ಮತ್ತಿ-ಒಂಟಿಯಂಗಡಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಾಲೂಕು ಮಹಿಳಾ ಮೋರ್ಚಾದ ಅಧ್ಯಕ್ಷೆ ಮಲ್ಚಿರ ಕವಿತಾ ಬೋಜಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಈ ಸಂಧರ್ಭ ತಾಲೂಕು ಪ್ರಧಾನ ಕಾರ್ಯದರ್ಶಿ ನೂರೇರ ರತಿ ಅಚ್ಚಪ್ಪ, ಮಂಡೇಪಂಡ ಮ್ಯೆನಾ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.