ಸೋಮವಾರಪೇಟೆ, ಅ. 6: ಪಟ್ಟಣದ ಉದ್ಯಮಿ, ಸಮಾಜ ಸೇವಕ, ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಬಿ.ಎಸ್. ಸದಾನಂದ್ ಅವರ ನಿಧನಕ್ಕೆ ಸ್ಥಳೀಯ ಚೇಂಬರ್ ಆಫ್ ಕಾಮರ್ಸ್ನಿಂದ ಸಂತಾಪ ಸಭೆ ನಡೆಯಿತು.
ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಚೇಂಬರ್ ಅಧ್ಯಕ್ಷ ಮನುಕುಮಾರ್ ರೈ, ಕಾರ್ಯದರ್ಶಿ ಜಯೇಶ್, ಉಪಾಧ್ಯಕ್ಷ ರಘು, ಸಹ ಕಾರ್ಯದರ್ಶಿ ಚಂದನ ಸುಬ್ರಮಣಿ, ಸಂಘಟನಾ ಕಾರ್ಯದರ್ಶಿ ಧನ್ರಾಜ್, ಪದಾಧಿಕಾರಿಗಳಾದ ರಾಮಶೆಟ್ಟಿ, ಲೀಲಾರಾಂ, ಹರೀಂದ್ರ, ಕೊಮಾರಿ ಸತೀಶ್, ಜಿಲ್ಲಾ ಸಮಿತಿಯ ಪ್ರಮುಖರಾದ ತಿಮ್ಮಶೆಟ್ಟಿ, ಹಂಸರಾಜ್, ಬಾಲಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹೋಂಸ್ಟೇ ಅಸೋಸಿಯೇಷನ್: ತಾಲೂಕು ಹೋಂ ಸ್ಟೇ ಅಸೋಸಿಯೇಷನ್ ವತಿಯಿಂದ ಪಟ್ಟಣದಲ್ಲಿ ಸಂತಾಪ ಸಭೆ ನಡೆಸಲಾಯಿತು. ಸಂಘದ ಅಧ್ಯಕ್ಷ ಎ.ಎಸ್. ಮಲ್ಲೇಶ್, ಕಾರ್ಯದರ್ಶಿ ಶ್ರೀಹರಿ, ಉಪಾಧ್ಯಕ್ಷ ವಿಠಲ್, ಖಜಾಂಚಿ ಡೆಂಜಿಲ್ ಸೇರಿದಂತೆ ಸದಸ್ಯರುಗಳು ಉಪಸ್ಥಿತರಿದ್ದರು.
ಸೋಮವಾರಪೇಟೆ,ಅ.5: ಪಟ್ಟಣದ ಉದ್ಯಮಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಸಮಾಜಸೇವೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದ ಬಿ.ಎಸ್. ಸದಾನಂದ್ ಅವರ ನಿಧನ ಸಮಾಜಕ್ಕಾದ ನಷ್ಟ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.
ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿ: ಸೋಮವಾರಪೇಟೆ ತಾಲೂಕು ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿ ವತಿಯಿಂದ ಪಟ್ಟಣದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸಂತಾಪ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಮಿತಿಯ ಕಾರ್ಯಾಧ್ಯಕ್ಷರೂ ಆಗಿರುವ ಅಪ್ಪಚ್ಚುರಂಜನ್ ಅವರು, ಸ್ವಾಮಿ ವಿವೇಕಾನಂದರು ಹಾಗೂ ಸ್ವಾಮಿ ಜಗದಾತ್ಮಾನಂದಜೀ ಅವರಿಂದ ಪ್ರೇರಣೆ ಪಡೆದಿದ್ದ ಸದಾನಂದ್ ಅವರು, ಯುವ ಜನರಲ್ಲಿ ನಾಯಕತ್ವದ ಗುಣಗಳನ್ನು ಮೂಡಿಸುವಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದರು ಎಂದರು.
ಕಳೆದ 7 ವರ್ಷಗಳಿಂದ ವಿವೇಕಾನಂದ ಜಯಂತಿಯನ್ನು ಆಯೋಜಿಸಿಕೊಂಡು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಉತ್ತೇಜನ ನೀಡುತ್ತಿದ್ದರು. ತಮ್ಮ ಸ್ವಂತ ಹಣದಿಂದಲೇ ಹಲವಷ್ಟು ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದರು ಎಂದು ಸ್ಮರಿಸಿದ ಶಾಸಕರು, ಕೊರೊನಾ ಸೋಂಕನ್ನು ಯಾರೂ ಕೂಡ ಲಘುವಾಗಿ ಪರಿಗಣಿಸಬಾರದು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭ ರೋಟರಿ ಸಹಾಯಕ ರಾಜ್ಯಪಾಲ ಪಿ.ಕೆ. ರವಿ, ರೋಟರಿ ಸಂಸ್ಥೆ ಅಧ್ಯಕ್ಷ ಲಿಖಿತ್ ದಾಮೋಧರ್, ವಿವೇಕಾನಂದ ಜಯಂತ್ಯೋತ್ಸವ ಸಮಿತಿ ಕಾರ್ಯದರ್ಶಿ ಎಸ್.ಮಹೇಶ್, ಖಜಾಂಚಿ ಮೃತ್ಯುಂಜಯ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.