ಮಡಿಕೇರಿ, ಅ. 6: ಕುಶಾಲನಗರ ಸನಿಹದ ಆನೆಕಾಡು ಸನಿಹ ಇಂದು ಸಂಜೆ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಕೆಲವರು ಗಾಯಗೊಂಡಿದ್ದಾರೆ.

ಮಡಿಕೇರಿ ಕಡೆಗೆ ಫೋರ್ಡ್ ಕಾರಿನಲ್ಲಿ ಆಗಮಿಸುತ್ತಿದ್ದ (ಕೆಎ 01 ಎಂಕೆ 1448) ಕೋಕಾಕೋಲ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ರಾಖೇಶ್, ಶ್ರೀನಾಥ್ ಹಾಗೂ ಸಂತೋಷ್ ಅವರುಗಳು ಕಾರನ್ನು ಅಲ್ಲಿನ ತಿರುವೊಂದರ ಬಳಿ ನಿಲ್ಲಿಸಿದ್ದರು. ಈ ಸಂದರ್ಭ ಮಡಿಕೇರಿ ಕಡೆಯಿಂದ ಶಿರಂಗಾಲದ ಶಿವಪ್ಪ ಎಂಬವರು ಚಾಲಿಸುತ್ತಿದ್ದ ಕಾರು (ಕೆಎ 01 ಎಎಸ್ 8514) ನಿಂತಿದ್ದ ಕಾರಿಗೆ ಡಿಕ್ಕಿಯಾಗಿದೆ. ಘಟನೆಯಿಂದ ರಾಖೇಶ್ ಅವರ ಕಾಲಿಗೆ ಗಂಭೀರ ಗಾಯವಾಗಿದ್ದು, ಇತರರು ಹಾಗೂ ಮತ್ತೊಂದು ಕಾರಿನ ಶಿವಪ್ಪ ಅವರಿಗೂ ಸಣ್ಣಪುಟ್ಟ ಗಾಯವಾಗಿದೆ. ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. -ಟಿ.ಜಿ. ಸತೀಶ್