ಕಡಂಗ, ಅ. 5: ಎಸ್.ವೈಎಸ್ ಹಾಗೂ ಎಸ್.ಎಸ್.ಎಫ್ ಎಮ್ಮೆಮಾಡು ಶಾಖೆಯ ವತಿಯಿಂದ ಲೀಡರ್ಸ್ ಕ್ಯಾಂಪ್ ಹಾಗೂ ತಾಜುಲ್ ಫುಕಾಹ್ಹ್ ಬೇಕಲ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಎಸ್‍ವೈಎಸ್ ಎಮ್ಮೆಮಾಡು ಶಾಖೆಯ ಅಧ್ಯಕ್ಷ ಸಯ್ಯದ್ ಇಲ್ಯಾಸ್ ಅಲ್ ಹೈದ್ರೂಸಿ ಎರುಮಾಡ್ ತಂಜ್ಞಳ್ ವಹಿಸಿದ್ದರು, ಎಸ್ ವೈ ಎಸ್ ಕೊಡಗು ಜಿಲ್ಲಾಧ್ಯಕ್ಷÀ ಅಬ್ದುಲ್ಲಾ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು ಎಸ್‍ವೈಎಸ್ ಕೊಡಗು ಜಿಲ್ಲಾ ಕಾರ್ಯದರ್ಶಿ ಮೊಯಿದೀನ್ ವಿಷÀಯ ಮಂಡಿಸಿದರು. ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷ ಸಯ್ಯದ್ ಕಿಲ್ಲೂರ್ ತಂಜ್ಞಳ್ ಹಾಗೂ ಹಾಫಿಲ್ ಉಮರುಲ್ ಫಾರೋಖ್ ಸಖಾಫಿ ಅನುಸ್ಮರಣ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಸಯ್ಯದ್ ಸೈಫುದ್ದೀನ್ ತಂಜ್ಞಳ್, ಎಸ್‍ವೈಎಸ್ ಎಮ್ಮೆಮಾಡು ಶಾಖೆಯ ಕಾರ್ಯದರ್ಶಿ ಮುಜೀಬ್, ಶೌಕತ್ ಎಮ್ಮೆಮಾಡು ಎಸ್‍ಎಸ್‍ಎಫ್ ಕೊಡಗು ಜಿಲ್ಲಾ ಸಮಿತಿ ಸದಸ್ಯ, ನೌಹಾರ್ ಎಸ್‍ಎಸ್‍ಎಫ್ ಎಮ್ಮೆಮಾಡು ಕಾರ್ಯದರ್ಶಿ, ಅಶ್ರಫ್ ಬಿ.ಯು. ಕಾದರ್ ಸಅ ಅದಿ ಮುಂತಾದವರು ಉಪಸ್ಥಿತರಿದ್ದರು.