ಚೆಟ್ಟಳ್ಳಿ, ಅ. 4: ಸಮಸ್ತ ಕೊಡಗು ಜಿಲ್ಲಾ ಜಂಇ ಯ್ಯತುಲ್ ಉಲಮಾ ಹಾಗೂ ಪೆÇೀಷಕ ಸಂಘಟನೆಗಳ ಅಧೀನದಲ್ಲಿ ಉಸ್ಮಾನ್ ಹಾಜಿ ಸಿದ್ದಾಪುರ ಹಾಗೂ ಬಾಬಜಾನ್ ಉಸ್ತಾದ್ ಮಡಿಕೇರಿ ಅನುಸ್ಮರಣಾ ಸಂಗಮ ತಹ್ಲೀಲ್ ಸಮರ್ಪಣೆ ಹಾಗೂ ಖತ್ಮುಲ್ ಖುರ್ ಆನ್ ದುಆ ಮಜ್ಲಿಸ್ ಕಾರ್ಯಕ್ರಮ ಸಿದ್ದಾಪುರದ ವರಕ್ಕಲ್ ಸ್ಮಾರಕ ಸೌಧದÀಲ್ಲಿ ನಡೆಯಿತು.
ಸಮಸ್ತ ಕೇಂದ್ರ ಮುಶಾವರ ಸದಸ್ಯರು,ಸಮಸ್ತ ಕೊಡಗು ಜಿಲ್ಲಾ ನಾಇಬ್ ಖಾಝಿ ಶೈಖುನಾ ಎಂ.ಎಂ.ಅಬ್ದುಲ್ಲಾ ಫೈಝಿ ನೇತೃತ್ವ ವಹಿಸಿದ್ದರು. ಸಭೆಯನ್ನು ಶೈಖುನಾ ಉಸ್ಮಾನ್ ಫೈಝಿ ಸುಂಟಿಕೊಪ್ಪ ಉದ್ಘಾಟಿಸಿದರು.
ಅನುಸ್ಮರಣಾ ಭಾಷಣವನ್ನು ಸಿ.ಪಿ.ಎಂ ಬಶೀರ್ ಹಾಜಿ,ತಮ್ಲೀಕ್ ದಾರಿಮಿ,ಯಾಕೂಬ್ ಬಜೆಗುಂಡಿ,ಸಿ.ಎಂ.ಹಮೀದ್ ಮೌಲವಿ,ಮಜೀದ್ ರವರು ಮಾಡಿದರು. ಅಶ್ರಫ್ ಫೈಝಿ ಸ್ವಾಗತಿಸಿ, ಇಕ್ಬಾಲ್ ಮೌಲವಿ ವಂದಿಸಿದರು.